ಲೇಖಕಿ ಕವಿತಾ ಹೆಗಡೆ ಅವರ ಪರಿಪೂರ್ಣ ವ್ಯಕ್ತಿತ್ವದ ಪೂರಕ ಪ್ರಬಂಧ ಸಂಕಲನ ‘ನೀವೂ ಗೆಲ್ಲಬಹುದು’. ಇವು ವಿನಯವಾಣಿ ಪತ್ರಿಕೆಯಲ್ಲಿ "ವಿಕಸನ" ಎಂಬ ಹೆಸರಿನ ಅಂಕಣದಲ್ಲಿ ಪ್ರತಿ ವಾರ ಪ್ರಕಟವಾದ ಲೇಖನಗಳ ಸಂಕಲನ. ಮಕ್ಕಳನ್ನು ಸದ್ಗುಣಿಯಾಗಿ ಬೆಳೆಸುವ ಬಗೆ, ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಿ ಬದುಕಿ ಬಾಳಿ ತೋರಿಸಿ ಅವರನ್ನು ಉಪಾಯವಾಗಿ ತಿದ್ದುವ ಕಲೆ, ಬದಲಾಗುತ್ತಿರುವ ಆಧುನಿಕ ಜೀವನದ ಸವಾಲುಗಳನ್ನು ಎದುರಿಸಿ ಗೆಲ್ಲುವ ಯುವ ಜನಾಂಗದ ಒತ್ತಡ ನರ‍್ವಹಣೆ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಬಗೆ ಹೀಗೆ ಹಲವು ವಿಷಯಗಳ ಕುರಿತಾಗಿ ವಿಭಿನ್ನ ಶೈಲಿಯಲ್ಲಿ ಬರೆದ ಪ್ರಬಂಧಗಳ ಸಂಕಲನವಿದು.
ಉತ್ತರ ಕನ್ನಡದ ಕುಮಟಾ ತಾಲೂಕಿನ ಕತಗಾಲದಲ್ಲಿ ಜನನ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಹುಟ್ಟೂರಿನಲ್ಲಿ. ಕುಮಟಾದ ಡಾ. ಎ ವಿ ಬಾಳಿಗಾ ಮಹಾವಿದ್ಯಾಲಯದಲ್ಲಿ ಪದವಿ. ಮೈಸೂರಿನಲ್ಲಿ ಡಿಪ್ಲೊಮಾ ಇನ್ ಫ್ಯಾಷನ್ ಟೆಕ್ನಾಲಜಿ. ಹುಬ್ಬಳ್ಳಿಯಲ್ಲಿ ಎಂ ಎ (ಇಂಗ್ಲಿಷ್ ) ಹಾಗೂ ಬಿ ಎಡ್ ಪದವಿ. ಬಾಲ್ಯದಿಂದಲೂ ಪ್ರಥಮ ಸ್ಥಾನದೊಂದಿಗೆ ತರ‍್ಗಡೆ. ಸಾಹಿತ್ಯದಲ್ಲಿ ಆಸಕ್ತಿ ಹಾಗೂ ರಚನೆ. ಪ್ರಸ್ತುತ ಹುಬ್ಬಳ್ಳಿಯ ಕೆ ಎಲ್ ಇ ಆಂಗ್ಲ ಮಾಧ್ಯಮ (ಸಿಬಿಎಸ್ಇ) ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. 2020ರಲ್ಲಿ ಹೊರಬಂದ "ದ ನೆಸ್ಟೆಡ್ ಲವ್" ಇವರ ಪ್ರಥಮ ಇಂಗ್ಲಿಷ್ ಕಥಾ ಸಂಕಲನ. ...
READ MORE