ಲೇಖಕ ಟಿ.ಎನ್. ಷಣ್ಮುಖ ಅವರು ಬರೆದ ಲೇಖನಗಳ ಸಂಗ್ರಹ ಕೃತಿ-ಮುಖ ಮತ್ತು ಮುಖವಾಡಗಳು. ಅವ್ವನ ಆರಾಧನೆ, ಅಪ್ಪನ ಜೂಜು, ಮನುವಿನ ಮಾನಗೇಡಿ ದೇವರು ಇತ್ಯಾದಿ ಶೀರ್ಷಿಕೆ ಲೇಖನಗಳು ಈ ಕೃತಿಯಲ್ಲಿ ಒಳಗೊಂಡಿವೆ. ವಸ್ತು ವೈವಿಧ್ಯತೆ ಇದೆ. ಭಾಷೆಯ ಸರಳವಾಗಿದೆ. ನಿರೂಪಣಾ ಶೈಲಿಯು ಆಕರ್ಷಕವಾಗಿದೆ.
ಲೇಖಕ, ಪತ್ರಕರ್ತ ಟಿ.ಎನ್. ಷಣ್ಮುಖ ಅವರು ಹುಟ್ಟಿದ್ದು 1960 ಏಪ್ರಿಲ್ 29ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯವರಾದ ಷಣ್ಮುಖ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್, ಅಗ್ನಿ ವಾರ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿರುವ ಇವರು ಪ್ರಜಾಕೂಗು ಎಂಬ ವಾರ ಪತ್ರಿಕೆಯನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಹೊರತಂದರು. ಎಂಬತ್ತರ ದಶಕದಲ್ಲಿ ಚಟುವಟಿಕೆಯಿಂದಿದ್ದ ಪ್ರಗತಿ ರಂಗ ಸಾಂಸ್ಕೃತಿಕ ಮತ್ತು ರಾಜಕೀಯ ರಂಗದ ಸಂಚಾಲಕನಾಗಿ ಕೆಲಸ ಮಾಡಿದ್ದಾರೆ. ಷಣ್ಮುಖ ಅವರ ಪ್ರಮುಖ ಕೃತಿಗಳೆಂದರೆ ನೆತ್ತರಿಗೆ ಬೆಲೆಯಿಲ್ಲ, ಒಡಲಾಳ, ಕಡಲತೀರದ ಕೋಮಲ ಹುಡುಗಿ, ಮುಖ ಮತ್ತು ಮುಖವಾಡಗಳು (ಲೇಖನಗಳ ...
READ MORE