‘ಭಾವಲೋಕ’ ಎಂಬುದು ಲೇಖಕ ಶ್ರೀಧರ ನಾಯಕ್ ಅವರು ರಚಿಸಿದ ಪ್ರಬಂಧಗಳ ಹಾಗೂ ಲೇಖನಗಳ ಸಂಕಲನ. ತಮ್ಮ ಅನುಭವಕ್ಕೆ ಬಂದ ಘಟನೆ, ವ್ಯಕ್ತಿ ವಿಶೇಷತೆಗಳನ್ನು ಬರಹಕ್ಕಿಳಿಸಿದ್ದು ಇಲ್ಲಿಯ ಆಕರ್ಷಣೆ. ವಸ್ತು, ನಿರೂಪಣಾ ಶೈಲಿ, ಸುಲಲಿತ ಭಾಷೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಬರಹವು ಓದುಗರ ಗಮನ ಸೆಳೆಯುತ್ತದೆ.
ಪತ್ರಕರ್ತ, ಲೇಖಕ ಶ್ರೀಧರ್ ನಾಯಕ್ ಅವರು 1956 ಜೂನ್ 23ರಂದು ಉಡುಪಿಯಲ್ಲಿ ಜನಿಸಿದರು. ಕಲ್ಬುರ್ಗಿ ಮತ್ತು ಹಾಸನದಲ್ಲಿ ಒಟ್ಟು ಹತ್ತು ವರ್ಷಗಳ ಕಾಲ ಜಿಲ್ಲಾ ವರದಿಗಾರರಾಗಿ ತಮ್ಮ ವಿಶೇಷ ವರದಿಗಳಿಂದ ಗಮನ ಸೆಳೆದವರು. 'ಪ್ರಜಾವಾಣಿ'ಯ ಸಂಪಾದಕೀಯ ವಿಭಾಗದಲ್ಲಿ ಮೂರು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು: ‘ನಿಗೂಢತೆಯ ಬೆನ್ನನೇರಿ ಹೊರಟಾಗ’ (ಕಿರುಕಾದಂಬರಿ), ‘ಸ್ಪಂದನ’ (ಲೇಖನಗಳ ಸಂಗ್ರಹ), ‘ಪತ್ರಿಕೋದ್ಯಮ : ಒಂದು ನೇರ ನೋಟ’ ...
READ MORE