ಡಾ . ಗಣಪತಿ ಆರ್ , ಭಟ್ ಅವರ ಲೇಖನಗಳ ಸಂಕಲನ-ಮಂದಹಾಸವು ಅರಳಲಿ. ಸಾಹಿತಿ ಕೆ.ಬಿ. ಪರಶಿವಪ್ಪ ಅವರು ಕೃತಿಗೆ ಮುನ್ನುಡಿ ಬರೆದು ‘ಬದುಕಿನ ನಾನಾ ಸಂದರ್ಭಗಳನ್ನು ಎದುರಿಸಲು ಬೇಕಾಗುವ ಧೈರ್ಯ , ಮಾನಸಿಕ ಸ್ಥೆರ್ಯ , ಜಾಣೆಗಳಿಗೆ ಸ್ಫೂರ್ತಿಯನ್ನು ಒದಗಿಸುವ ಮಹನೀಯರ ಜೀವನ ಮಾದರಿಯು ನಮಗೆ ಬಹಳವೇ ಅವಶ್ಯಕ . ಈ ನಿಟ್ಟಿನಲ್ಲಿ ನಮ್ಮ ನೆಲದ ರಾಮಾಯಣ , ಮಹಾಭಾರತ ಹಾಗೂ ಇನ್ನಿತರ ಕಾವ್ಯಗಳಲ್ಲಿ ಬರುವ ಸತ್ವಭರಿತ ಪಾತ್ರಗಳು ಹಾಗೂ ಅವುಗಳಲ್ಲಿನ ಆಣಿಮುತ್ತುಗಳು ಜೀವನಪ್ರೀತಿಯ ಅದಮ್ಯ ಪ್ರೇರಣೆಯಾಗಿ ನಮ್ಮಗೆ ಅನೇಕ ಸಲ ಒದಗಿ ಬರುವುದುಂಟು . ಈ ಪುಸ್ತಕದಲ್ಲಿ ಬರುವ ಬರಹಗಳು ಇಂಥಹ ಕಾವ್ಯಸೆಲೆಯಲ್ಲಿ ಮಿಂದು ಗಣಪತಿ ಭಟ್ಟರ ಲೇಖನಿಯ ಮೂಲಕ ಅಂದವಾದ ರೂಪ ತಳೆದಿವೆ . ಇಲ್ಲಿನ ಲೇಖನಗಳು ಜೀವನಧರ್ಮದ ನಾನಾ ಆಯಕಟ್ಟುಗಳನ್ನು ಸಚಿತ್ರವಾಗಿ ಬಿತ್ತರಿಸುತ್ತಾ , ಹಿರಿಯರ ಜೀವನಾನುಭವವನ್ನು ಸ್ವಯಂವೇದ್ಯವಾಗುವಂತೆ ಮಾಡುತ್ತವೆ . ಪತ್ರಿಕಾಧರ್ಮದ ಚೌಕಟ್ಟಿನಡಿ ಬರೆಯಲ್ಪಟ್ಟ ಈ ಬರಹಗಳು ಮಿತಾಕ್ಷರಗಳಲ್ಲಿಯೇ ಜೀವನದ ಮಹದಾಶಯಗಳನ್ನು ಸಂವೇದಿಸುವುದರಲ್ಲಿ ಸಂದೇಹವಿಲ್ಲ . ಸರಳ ಪದಬಳಕೆಯಿಂದ ಸುಲಭವೇದ್ಯವೂ , ರಸಪ್ರಸಂಗಗಳ ದೃಷ್ಟಾಂತಗಳಿಂದ ಸಂದರ್ಭೋಚಿತವೂ ಆದ ಈ ಕೃತಿ ಸಂಗ್ರಹಯೋಗ್ಯವಾದುದು’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಗಣಪತಿ ಆರ್ ಭಟ್ ಅವರು ಬೆಂಗಳೂರಿನ ಎನ್ ಜಿ ಇಎಫ್ ಲೇಔಟ್ ನಲ್ಲಿರುವ ಕಸ್ತೂರಿ ನಗರದ ನ್ಯೂ ಹಾರಿಜನ್ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರು. ಮಂದಹಾಸವು ಅರಳಲಿ ಎಂಬುದು ಇವರ ಲೇಖನಗಳ ಸಂಕಲನ. ...
READ MORE