“ನೀನಾ ಭಗವಂತ” ಎನ್ನುತ್ತಾ ಕನ್ನಡ ಸಿನಿ ಸಾಹಿತ್ಯಕ್ಕೆ ಹಂಸಲೇಖ ಕಾಲಿಟ್ಟು ಐವತ್ತು ವರ್ಷಗಳಾಗಿ ಹೋದವು, ಈ ವರ್ಷ ಹಂಸಾಭಿಮಾನಿಗಳಿಗೆ ಡಬಲ್ ಖುಷಿ, ಒಂದು ಕಡೆ ಹಂಸಲೇಖ ಕನ್ನಡ ಸಿನಿ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿ ಐದು ದಶಕಗಳಾದರೆ, ಮತ್ತೊಂದು ಕನ್ನಡ ಸಂಸ್ಕೃತಿಯ ಹಬ್ಬ ದಸರಾಗೆ ಚಾಲನೆ ನೀಡಿದ್ದು ಹಂಸಲೇಖಾರೇ. ಈ ಡಬಲ್ ಖುಷಿಯನ್ನ ತ್ರಿಬಲ್ ಖುಷಿಯಾಗಿಸಲು ಈ ಪುಸ್ತಕ ಸಣ್ಣ ನೆಪವಷ್ಟೇ. ಐದು ದಶಕಗಳ ಕಾಲ ಮೂರುವರೆ ಸಾವಿರಕ್ಕೂ ಮಿಗಿಲಾಗಿ ಹಾಡು ಬರೆದು ಸಂಗೀತ ನೀಡಿದ ಹಂಸಲೇಖ ಕನ್ನಡ ಸಿನಿಸಾಹಿತ್ಯಕ್ಕೆ ಮನೆದೇವ್ರು. ಅವರ ಹಾಡುಗಳನ್ನ, ಹಾಡಿನ ಸಾಲುಗಳನ್ನ, ಐವತ್ತು ವರ್ಷ ಕೊಟ್ಟ ಖುಷಿಯನ್ನ, ಅವರ ಮಗುವಿನಂಥ ನಗುವನ್ನು ಸಂಭ್ರಮಿಸಲು “ಹಂಸಾಕ್ಷರ” ಎನ್ನುವ ಈ ಪುಸ್ತಕಕ್ಕಿಂತ ಮತ್ತೊಂದು ಕಾರಣ ಬೇಕಾ. ಈ ಪುಸ್ತಕದಲ್ಲಿ ಹಂಸಲೇಖ ಕಟ್ಟಿಕೊಟ್ಟ ಲೋಕವಿದೆ.
ಬೆಂಗಳೂರಿನವರು, ನಮ್ಮ ಮೆಟ್ರೋದಲ್ಲಿ ಉದ್ಯೋಗ. ಅಡಕಸಬಿ ಅಡ್ಡ ಕ್ಲಬ್ ಹೌಸ್ ನ ರೂವಾರಿ, ನಿತ್ಯ ಓದಿನ ಜಾತ್ರೆಯಾದ ಓದು ಜನಮೇಜಯ ಕಾರ್ಯಕ್ರಮ ಶುರು ಮಾಡಿದವರು. ಬ್ಲಾಗ್ ಬರಹಗಾರರು ಮತ್ತು ಸಿನಿಕರ್ತರು ಕೂಡ.ಕೆಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಕೃತಿ : ಕರಿ ಮುಗಿಲ ಕಾಡಿನಲಿ ...
READ MOREಮೊದಲ ಓದು: ಹಂಸಾಕ್ಷರ– ಹಂಸಲೇಖ ಗೀತೆಗಳ ಅವಲೋಕನ - ಪ್ರಜಾವಾಣಿ