ಬಯಲು ತಾರೆಗಳು

Author : ರಮೇಶ ಎಸ್.ಕತ್ತಿ



Year of Publication: 2021
Published by: ಬೆರಗು ಪ್ರಕಾಶನ
Address: ಕಡಣಿ 586202, ಆಲಮೇಲ ತಾಲೂಕು, ವಿಜಯನಗರ ಜಿಲ್ಲೆ.
Phone: 7795341335

Synopsys

‘ಬಯಲು ತಾರೆಗಳು’ ಕೃತಿಯು ರಮೇಶ್ ಕತ್ತಿ ಅವರ ಪತ್ರಿಕಾ ಲೇಖನ ಹಾಗೂ ಸಂದರ್ಶನದ ಬರಹಗಳ ಕೃತಿ. ತಾರೆಗಳು (ನಕ್ಷತ್ರಗಳು) ಆಕಾಶದ ಬಯಲಿನಲ್ಲಿ ಸದಾ ಮಿನುಗುತ್ತಿರುತ್ತವೆ. ಅವುಗಳಿಂದ ಹೊರ ಹೊಮ್ಮುವ ಹೊಳಪು ನೋಡುಗರನ್ನು ಪುಳಕಗೊಳಿಸುದರ ಜೊತೆಗೆ ಭರವಸೆಗಳನ್ನು ಹುಟ್ಟಿಸುತ್ತವೆ. ಹಾಗೆ, ಸಮಾಜದ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರು ತಾರೆಯಂತೆ ಕಂಗೊಳಿಸುತ್ತಾರೆ ಹಾಗೂ ನೋಡುಗರ ಮನದಲ್ಲಿ ನೆಲೆಯೂರುತ್ತಾರೆ. ಸಾಧಕರಲ್ಲಿ ಹಿರಿ-ಕಿರಿ, ಹೆಣ್ಣು-ಗಂಡು ಎಂಬ ಯಾವ ತರಹದ ತಾರತಮ್ಯ ಭಾವವೂ ಇರುವುದಿಲ್ಲ. ಆದರೆ, ಗುರುತಿಸುವುವರು ಪ್ರೋತ್ಸಾಹಿಸುವವರು ಜಾತಿ, ಮತ, ಪಂಗಡ ಪಂಥ, ಪಕ್ಷ ಎಂದೆಲ್ಲಾ ಹೆಣಗಾಡುತ್ತಾರೆ. ಮಾನವತೆಯ ವಿರುದ್ಧವಾದ ನಡೆ ನೋಟಗಳಲ್ಲಿ ಮುಳುಗುತ್ತಾರೆ ಎಂಬುದನ್ನು ಲೇಖಕರು ಇಲ್ಲಿ ವಿಶ್ಮೇಷಿಸಿದ್ದಾರೆ. ಈ ಭಾವ, ‘ಬಯಲು ತಾರೆಗಳು’ ಕೃತಿ ಓದಿದಾಗ ಎಲ್ಲರ ಹೃದಯ ಮತ್ತು ಮನಸ್ಸುಗಳಲ್ಲಿ ಸ್ಥಾಯಿಯಾಗಿ ನಿಲ್ಲುತ್ತದೆ, ಈ ಕೃತಿಯಲ್ಲಿ ಸಂದರ್ಶನಗಳು, ವ್ಯಕ್ತಿ ವಿಶೇಷ, ಕಲೆ ಸಂಸ್ಕೃತಿ, ಸಾಮಾಜಿಕ, ಕೃಷಿ, ಉದ್ಯಮ ಎಂಬ ಐದು ಭಾಗಗಳನ್ನಾಗಿ ರೂಪಿಸಿಕೊಂಡು ಮಹತ್ವದ ಸಂಗತಿ ಮತ್ತು ಸನ್ನಿವೇಶಗಳನ್ನು ಓದುಗನ ಮುಂದೆ ಅನಾವರಣಗೊಳಿಸುತ್ತಾರೆ. ಇದು ನಮ್ಮ ಕಣ್ಣ ಮುಂದಿರುವ ವ್ಯವಸ್ಥೆ ಮತ್ತು ವ್ಯಕ್ತಿಗಳ ಜೀವನ ಹಾಗೂ ಸಾಧನೆಗಳನ್ನು ಪರಿಚಯಿಸುವ ಕೃತಿ ಎಂಬ ಹೆಗ್ಗಳಿಕೆ ಮೂಡಿಸುತ್ತದೆ.

About the Author

ರಮೇಶ ಎಸ್.ಕತ್ತಿ
(28 August 1978)

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.   ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...

READ MORE

Related Books