ಆರ್.ಪಿ.ಹೆಗಡೆ ಅವರ ವಿಚಾರ ವಾಹಿನಿ ಕೃತಿಯು ಚಿಂತನಪರ ಕಿರುಬರೆಹದ ಸಂಗ್ರಹವಾಗಿದೆ. ಈ ಕೃತಿಗೆ ಎಸ್.ರಾಮಸ್ವಾಮಿಯವರ ಮುನ್ನುಡಿ ಹಾಗೂ ಕೆಕ್ಕಾರ ನಾಗರಾಜ ಬೆನ್ನುಡಿಗಳನ್ನು ಬರೆದಿದ್ದಾರೆ.. ಸ್ವಾತಂತ್ರ್ಯದ ಜವಾಬ್ದಾರಿ ಕುರಿತು ಬರೆಯುತ್ತ,ಸ್ವಾತಂತ್ರ್ಯವೆಂಬುದು ತುಂಬಾ ಅಮೂಲ್ಯವಾದದ್ದು, ನಮಗೆ ಅದರ ಮಹತ್ವಗೊತ್ತಾಗಿದ್ದು ಪರತಂತ್ರ್ಯದಲ್ಲಿದ್ದಾಗ,ಯಾವುದಾದರೂ ಅಷ್ಟೆ ನಮ್ಮಬಳಿ ಇದ್ದಾಗ ಯಾವುದರ ಮಹತ್ವವೂ ನಮಗೆ ತಿಳಿಯುವುದಿಲ್ಲಾ ಅದನ್ನು ಕಳೆದುಕೊಂಡಾಗಲೆ ಎಂಬುದನ್ನು ಚೆನ್ನಾಗಿ ಮನಮುಟ್ಟುವಂತೆ ಬರೆದಿರುವರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...
READ MORE