‘ಸ್ಪಂದನ’ ಕೃತಿಯು ಕುಮಾರ ಬೇಂದ್ರೆ ಅವರ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಸುಮಾರು ಹದಿನೈದು ವರ್ಷಗಳ ಕಾಲಘಟ್ಟದಲ್ಲಿ ಆಗೊಮ್ಮೆ ಈಗೊಮ್ಮೆ ಸಂದರ್ಭಾನುಸಾರ ಬರೆದ, ಹಲವು ನಿಯತ ಕಾಲಿಕೆಗಳಲ್ಲಿ ಪ್ರಕಟವಾಗಿದ್ದ ಲೇಖನಗಳನ್ನು ಒಂದೆಡೆ ಸಂಕಲಿಸುವುದು ಸ್ಪಂದನ’ ಉದ್ದೇಶ. ಓದಿದ ಪುಸ್ತಕಗಳು, ವೀಕ್ಷಿಸಿದ ಸದಭಿರುಚಿಯ ಚಲನಚಿತ್ರಗಳ ಕುರಿತ ರಸಗ್ರಹಣ, ಅವಲೋಕನ, ಚರ್ಚೆ-ಸಂವಾದಗಳು ಹಾಗೂ ವರ್ತಮಾನ ವಿಶೇಷ ವಿಷಯಗಳನ್ನು ವಿಶ್ಲೇಷಿಸುವ ಬರಹಗಳು ಇಲ್ಲಿವೆ. ಕನ್ನಡ ಚಿತ್ರ ಜಗತ್ತಿನಲ್ಲಿ ಪರ್ಯಾಯ ಚಿತ್ರಗಳ ವರ್ತಮಾನ ಸ್ಥಿತಿ-ಗತಿ, ಅದು ಸಾಗಬೇಕಾದ ಹಾದಿ, ಸಾಧಕ ಬಾಧಕಗಳ ಕುರಿತು ನಿರ್ದೇಶಕ ಪಿ.ಶೇಷಾದ್ರಿ ಅವರು ಮಾತನಾಡಿರುವ ಸಂದರ್ಶನವೊಂದು ಇಲ್ಲಿದೆ. ಶೈಕ್ಷಣಿಕ ಭಾಷಾ ಮಾಧ್ಯಮ ಕುರಿತು ಗಂಭೀರ ಚಿಂತನೆ ನಡೆಸುವ ‘ಇಂಗ್ಲಿಷ್ ಮಾಧ್ಯಮಕ್ಕೆ ವಿರೋಧ ಸಾಧುವೆ?’ ಎಂಬ ಶೀರ್ಷಿಕೆಯ-ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಅತ್ಯುತ್ತಮ ಲೇಖನ’ ಪ್ರಶಸ್ತಿ ಪುರಸ್ಕೃತ ಲೇಖನವಿದೆ. ಅಲ್ಲದೇ, ಹಲವು ಸಾಹಿತ್ಯ ಕೃತಿಗಳ ಕುರಿತ ರಸಗ್ರಹಣ-ಅವಲೋಕನದ ಬರಹಗಳು ಇಲ್ಲಿ ದಾಖಲಾಗಿವೆ. ಆಯಾ ಕಾಲದ ಅಗತ್ಯಗಳನ್ನು ಪೂರೈಸಿದ ಈ ಬರಹಗಳನ್ನು ಇಡಿಯಾಗಿ ಓದಿದಾಗ ಚಿಂತನಾ ನೆಲೆ ಮತ್ತು ಸಾಹಿತ್ಯ, ಸಿನಿಮಾ, ವರ್ತಮಾನ ಕುರಿತ ನನ್ನ ದೃಷ್ಟಿ ಧೋರಣೆ, ಆಸಕ್ತಿಯನ್ನು ತಿಳಿಯಲು ಪೂರಕವಾಗಬಹುದು’ ಎಂದಿದೆ.
ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...
READ MORE