ಉರಿದ ಪಂಜು

Author : ಡಿ.ಎಸ್.ನಾಗಭೂಷಣ

Pages 574

₹ 375.00




Year of Publication: 2012
Published by: ಅಭಿರುಚಿ ಪ್ರಕಾಶನ
Address: ನಂ. 386, 14ನೆಯ ಮುಖ್ಯರಸ್ತೆ, 3ನೆಯ ಅಡ್ಡರಸ್ತೆ, ಸರಸ್ವತೀಪುರ, ಮೈಸೂರು- 9
Phone: 9980560013

Synopsys

ಲೇಖಕರಾದ ಡಿ. ಎಸ್.‌ ನಾಗಭೂಷಣ ಹಾಗೂ ಪ್ರೊ. ಎಚ್.‌ ಎಲ್.‌ ಕೇಶವಮೂರ್ತಿ ಅವರ ಸಂಪಾದನೆಯಲ್ಲಿ ಬಂದ ಲೇಖನಗಳ ಸಂಗ್ರಹ ʻಉರಿದ ಪಂಜುʼ. ಪುಸ್ತಕವು ಲೇಖಕ ಪ್ರೊ. ಕೆ. ರಾಮದಾಸ್‌ ಕುರಿತ ಲೇಖನಗಳನ್ನು ಒಳಗೊಂಡಿದೆ. ಡಿ. ಎಸ್.‌ ನಾಗಭೂಷಣ ಅವರು ಪುಸ್ತಕದ ಸಂಪಾದಕರ ನುಡಿಯಲ್ಲಿ, “ರಾಮದಾಸ್ ಸ್ವಾತಂತ್ರೋತ್ತರ ಭಾರತದ ಮೊದಲ ಕೆಲವು ದಶಕಗಳಲ್ಲಾದರೂ ನಮ್ಮ ಪ್ರಜಾಪ್ರಭುತ್ವ, ನಿಜವಾದ ಅರ್ಥದಲ್ಲಿ ಕ್ರಿಯಾಶೀಲವಾಗಿದ್ದುದರ ದ್ಯೋತಕವೇ ಆಗಿದ್ದಾರೆ. ಹಾಗೇ ಆ ಕ್ರಿಯಾಶೀಲತೆ ನಂತರದ ದಶಕಗಳಲ್ಲಿ ಅವನತಿಗೊಳ್ಳುತ್ತಾ ಬಂದುದರ ದ್ಯೋತಕವೂ ಆಗಿದ್ದಾರೆ ಇನ್ನೊಂದು ಅರ್ಥದಲ್ಲಿ. ಮೊದಲ ಘಟ್ಟದಲ್ಲಿ ರಾಮದಾಸ್ ಕನ್ನಡ ನಾಡಿನ ಒಂದು ಅಜ್ಞಾತ ಗ್ರಾಮದ ಒಂದು ಅಜ್ಞಾತ ಜಾತಿಯ ಬಡ ಕುಟುಂಬದಲ್ಲಿ ಹುಟ್ಟಿದ ಹುಡುಗನಾಗಿ ತನ್ನ ಬದುಕನ್ನು ಯಶಸ್ವಿಯಾಗಿ ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟ ಪ್ರಜಾಪ್ರಭುತ್ವದ ಮೌಲ್ಯಗಳ ಪ್ರತಿನಿಧಿಯಾದರೆ, ಎರಡನೇ ಘಟ್ಟದಲ್ಲಿ ಈ ಮೌಲ್ಯಗಳು ಅವನತಿಯ ಹಾದಿ ಹಿಡಿದಾಗ ಅದರ ವಿರುದ್ಧ ವೈಯಕ್ತಿಕ ತುರ್ತಿನೊಂದಿಗೆ ದನಿ ಎತ್ತಿದ ಹಲವು ಸಮೂಹಗಳು, ಆಂದೋಲನಗಳ ಪ್ರತಿನಿಧಿಯೂ ಆಗಿದ್ದಾರೆ. ಅವರು ತಮ್ಮ ಬದುಕಿನ, ಪ್ರತಿಭಟನೆಯ ತಿರುಳು ಮತ್ತು ದಿಕ್ಕುಗಳನ್ನು ಲೋಹಿಯಾ ಸಮಾಜವಾದಿ ಆಂದೋಲನದಿಂದ ಪಡೆದುಕೊಂಡರಾದರೂ, ಎಲ್ಲ ರೀತಿಯ ಅನ್ಯಾಯಗಳ ವಿರುದ್ಧ ದನಿ ಎತ್ತಲು ಅವರು ಅದನ್ನು ಒಂದು ಮಿತಿಯನ್ನಾಗಿಯೇನೂ ಪರಿಗಣಿಸಲಿಲ್ಲ. ಇಂತಹ ಉಲ್ಲಂಘನೆಗಳ ಮೂಲಕವೇ ಲೋಹಿಯಾ ವಿಚಾರಗಳಿಗೆ, ಸಮಾಜವಾದಿ ಆಂದೋಲನದ ಛಿದ್ರೀಕರಣದ ನಂತರವೂ ಅವರು ಚಲಾವಣೆಯನ್ನು ಒದಗಿಸಿಕೊಟ್ಟರು. ಅವುಗಳ ಕ್ರಿಯಾಶೀಲ ಜೀವಂತಿಕೆಯನ್ನು ಕಾಪಾಡುತ್ತಾ ಹೋದರು ಎಂದೇ ಹೇಳಬೇಕು. ರಾಮದಾಸ್ ಪೆರಿಯಾ‌ರ್‍ ಮೂಲದ ವಿಚಾರವಾದಿಯೂ ಆಗಿದ್ದುದರಿಂದ ಅವರ ವ್ಯಕ್ತಿತ್ವ ಯಾವಾಗಲೂ ಸಮಾಜವಾದಿ ತಾಂತ್ರಿಕ ಚೌಕಟ್ಟಿನಲ್ಲೇ ಇರುತ್ತಿತ್ತೆಂದು ಹೇಳಲೂ ಆಗುತ್ತಿರಲಿಲ್ಲ. ಇದರಿಂದಾಗಿ ಅವರು ಆಗಾಗ್ಗೆ ತಮ್ಮ ವೈಯಕ್ತಿಕ ನಿಲುವುಗಳ ಮೂಲಕ ಸಮಾಜವಾದಿ ಗೆಳೆಯರನ್ನು ಬೆಚ್ಚಿ ಬೀಳಿಸುತ್ತಿದ್ದರು. ಇಲ್ಲಿ ರಾಮದಾಸ್ ಸಾರಾಸಗಟಾಗಿ 'ಹೀರೋ' ಆಗಿಯೇ ಚಿತ್ರಿತವಾಗಿರುವ ಸಂಭವವಿದೆ. ಆದರೆ ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರು ಎಲ್ಲ ಸಂದರ್ಭಗಳಲ್ಲೂ ಹೀರೋ ಏನೂ ಆಗಿರಲಿಲ್ಲ ಎಂಬುದೂ ಗೊತ್ತಿದೆ. ಎಲ್ಲ ಸಾಮಾನ್ಯ ಮನುಷ್ಯರಂತೆ ಅವರು ಅಹಂಕಾರಿಯಾಗಿಯೂ, ಕೆಟ್ಟ ಹಠವಾದಿಯಾಗಿಯೂ, ಅತಿ ವೈಯಕ್ತಿಕವಾದಿಯಾಗಿಯೂ, ಕುರುಡು ವ್ಯಕ್ತಿ ನಿಷ್ಠೆಯಿಂದಲೂ ವರ್ತಿಸಿದ ಹಲವು ಸಂದರ್ಭಗಳುಂಟು. ಮೈಸೂರಿನ ಹಲವು ಗೆಳೆಯರು ಅವರ ಮುಂಗೋಪ, ಅಸಹನೆ, ಸಿಟ್ಟು ಸೆಡವು ಮತ್ತು ಅಸಮರ್ಥನೀಯ ಆರೋಪ ಮತ್ತು ಕಟು ಟೀಕೆಗಳಿಂದ ನೊಂದು ಅವರಿಂದ ಕೆಲವರು ದೀರ್ಘಕಾಲಿಕವಾಗಿ, ಇನ್ನು ಕೆಲವರು ಶಾಶ್ವತವಾಗಿ ದೂರವಾದ ಸಂದರ್ಭಗಳೂ ಉಂಟು. ಇದರಿಂದಾಗಿ ಅವರೇ ರೂಪಿಸುತ್ತಿದ್ದ, ಪೋಷಿಸುತ್ತಿದ್ದ, ಬೆಂಬಲಿಸಿ ಭಾಗವಹಿಸುತ್ತಿದ್ದ ಅನೇಕ ಕಾರ್ಯಕ್ರಮಗಳಿಗೆ, ಆಂದೋಲನಗಳಲ್ಲದೆ ಸಾಕಷ್ಟು ಹಾನಿಯೂ ಆಗಿದೆ. ಅವರಿಗೆ ಎಲ್ಲರಿಗಿದ್ದಂತೆ ಸಣ್ಣ ಪುಟ್ಟ ಸಾರ್ವಜನಿಕ ಆಸೆಗಳಿದ್ದುವಾದರೂ (ಅವರ ರಾಜಕೀಯ ಸ್ನೇಹಿತರೇ ಉದ್ದೀಪಿಸಿದ್ದ ಎಂ.ಎಲ್.ಸಿ. ಗಿರಿ ಅಥವಾ ಕೆಪಿಎಸ್‌ಸಿ ಸದಸ್ಯತ್ವ ಇತ್ಯಾದಿ), ಯಾವುದೇ ಆಂದೋಲನವನ್ನು ತಮ್ಮ ಯಾವುದೇ ಸ್ವಾರ್ಥಕ್ಕೆ ಅವರು ಬಲಿಗೊಡದಷ್ಟು ಸಮಗ್ರತೆ ಇದ್ದ ಮನುಷ್ಯರಾಗಿದ್ದುದರಿಂದ ಇಂತಹ ಹಾನಿಗಳನ್ನು ಅವರ ಗೆಳೆಯರು ಮನಸ್ಸಿಗೆ ಹಾಕಿಕೊಳ್ಳದೇ ಅವರ ಕೊನೆಯ ದಿನದವರೆಗೂ ಅವರ ಜೊತೆಗೆ ಕೈಗೂಡಿಸಿ ನಡೆದಿದ್ದಾರೆ. ಹೀಗೆ ರಾಮದಾಸ್ ಎಂಬ 'ಉರಿದ ಪಂಜು'ಗೆ ಇಂಧನಗಳು ಹಲವಾರು !” ಎಂದು ಹೇಳಿದ್ದಾರೆ.

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Related Books