ಮುಖತಃ -ಡಾ. ಎಚ್. ಗಾಯತ್ರಿ ಅವರು ಮಾಡಿರುವ ಸಂದರ್ಶನ ಲೇಖನಗಳ ಸಂಕಲನ. ಕೃತಿಗೆ ಬೆನ್ನುಡಿ ಬರೆದಿರುವ ರಹಮತ್ ತರೀಕೆರೆ ಅವರು “ಇಲ್ಲಿನ ಸಂದರ್ಶನಗಳು ಸಾಧಕರ ವ್ಯಕ್ತಿಚಿತ್ರಗಳೂ ಆಗಿವೆ. ಗೋವಿಂದ ಪಾನ್ಸರೆ, ಅನಸೂಯಮ್ಮ, ರಂಗನಾಯಕಮ್ಮ, ಪ್ರತಿಭಾರೇ, ಕೋಟೇಶ್ವರಮ್ಮ, ವಿಜಯಮ್ಮ ಅವರ ಅನುಭವ ಮತ್ತು ವ್ಯಕ್ತಿಚಿತ್ರಗಳು ವಿಶಿಷ್ಟವಾಗಿದೆ. ಸಂದರ್ಶನಗಳು ಗಾಯತ್ರಿಯವರ ಪರಿಚಯಾತ್ಮಕ ಟಿಪ್ಪಣಿ ಹಾಗೂ ಜೀವನ ಚರಿತ್ರಾತ್ಮಕ ವಿವರಣೆಯಿಂದಲೂ, ಸೈಡ್‌ವಿಂಗಿನ ಕೆಲವು ಮಾಹಿತಿಗಳಿಂದಲೂ (ಉದಾ: ರಂಗನಾಯಕಮ್ಮನವರ ಮನೆಯಲ್ಲಿರುವ ಸೂಚನಾಫಲಕಗಳು) ಸ್ವಾರಸ್ಯಕರವಾಗಿ ಓದಿಸಿಕೊಳ್ಳುವ ಲೇಖನಗಳೂ ಆಗಿವೆ. ಕನ್ನಯ್ಯ ಮುಕ್ತಾ ಸರಸ್ವತಿ ಬಿಟ್ಟರೆ ಇಲ್ಲಿನ ಹೆಚ್ಚಿನ ಸಾಧಕರು ಹಿರಿಯರು. ಹೀಗಾಗಿ ಈ ಸಂಕಲನದ ಓದು ಫಲಬಿಟ್ಟ ಮರಗಳಿರುವ ತೋಟದಲ್ಲಿ ವಿಹಾರ ಮಾಡಿದ ಅನುಭವ ಕೊಡುತ್ತದೆ” ಎಂದಿದ್ದಾರೆ.
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. 1957 ರ ಜನೆವರಿ 17 ರಂದು ಜನನ. ಸಾಹಿತ್ಯದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ರಿಸರ್ವ್ ಬ್ಯಾಂಕಿನಲ್ಲಿ ಅಧಿಕಾರಿ.ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ...
READ MORE