ಲೇಖಕ ಎನ್. ಕೆ. ಮೋಹನ್ ರಾಂ ಅವರ ಚಿಂತನಾತ್ಮಕ ಕೃತಿ- ‘21ನೇ ಶತಮಾನದ ಭಾರತೀಯ ಮುಸ್ಲಿಮರ ಅನಾಥಪ್ರಜ್ಞೆ’ . ಭಾರತೀಯ ಮುಸ್ಲಿಂರು ಮೊದಲ ಬಾರಿಗೆ ಇಂಡಿಯಾಕ್ಕೆ ಬಂದಿದ್ದರಿಂದ ಹಿಡಿದು, ದೇಶ ವಿಭಜನೆಯವರೆಗೂ ಆದ ಐತಿಹಾಸಿಕ ಬೆಳವಣಿಗೆಗಳು, ಭಾರತದಲ್ಲಿ ಮುಸ್ಲಿಂರ ಬದುಕು, ದುಃಖ ದುಮ್ಮಾನಗಳು, ರಾಜಕೀಯ ಇತಿಹಾಸ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಪಲ್ಲಟಗಳು, ಧಾರ್ಮಿಕ ದಬ್ಬಾಳಿಕೆಗೆ ನಲುಗಿದ ಸಾಮಾನ್ಯ ಜನತೆ ಹೀಗೆ ಮುಸ್ಲಿಂರ ಬದುಕನ್ನು ಕಟ್ಟಿಕೊಡಲಾಗಿದೆ. ಬಂದಿದ್ದು ಇಲ್ಲಿ ನೆಲೆಸಲೆಂದೇ ಕೊಳ್ಳೆಗಾಗಿ ಅಲ್ಲ,, ಉದ್ದುದ್ದ ಒಡೆದ ರುಬ್ಬುಕಲ್ಲು ದೇಶ ವಿಭಜನೆಯ ರೂಪಕವಾಗಿತ್ತೇ?, ಮುಸ್ಲಿಮರ ಭಾರತ ಪ್ರವೇಶ ಜಿಹಾದ್ ಆಗಿರಲಿಲ್ಲ, ಬಾಬರ್ ಬರದಿದ್ದರೆ ನಾದಿರನೋ ಮತ್ತೊಬ್ಬನೋ ಬರುತ್ತಿದ್ದ, ಇಲ್ಲುಳಿದವರು ಹಸಿದವರು ಮತ್ತು ಬಡವರು, ಅಲ್ಪಸಂಖ್ಯಾತರೆಂಬ ರಾಜಕೀಯ ಗಿಮಿಕ್, ಬೇಕಾಗಿದೆ ಸಮಾನ ನಾಗರಿಕ ಸಂಹಿತೆ ಇತ್ಯಾದಿ ಲೇಖನಗಳು ಕೃತಿಯಲ್ಲಿ ಸಂಕಲನಗೊಂಡಿವೆ. ಹಿಂದು ಮುಸ್ಲಿಂರ ಮಧ್ಯೆ ವಿಷ ಬೀಜವನ್ನು ಹೇಗೆ ಬಿತ್ತಲಾಗುತ್ತಿದೆ ಮತ್ತು ಮುಸ್ಲಿಂರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಹೇಗೆ ಬಾಳಬೇಕು ಎನ್ನುವುದೂ ಸಹ ಇಲ್ಲಿ ಪ್ರಸ್ತಾಪಿಸಲಾಗಿದೆ.
ಇತಿಹಾಸದ ಕುತೂಹಲಕರ ವಿಷಯ: ತೆಳ್ಳಗಿನ ಗ್ರಹಿಕೆ-ಪ್ರಜಾವಾಣಿ-ವಿಮರ್ಶೆ
--
‘21ನೇ ಶತಮಾನದ ಭಾರತೀಯ ಮುಸ್ಲಿಮರ ಅನಾಥ ಪ್ರಜ್ಞೆ’ ಕೃತಿಯ ವಿಮರ್ಶೆ
ಇತಿಹಾಸದ ಒಂದು ಸಕಾಲಿಕ ಹಿನ್ನೋಟ
ಇತಿಹಾಸವನ್ನು ಪಠ್ಯಮಸ್ತಕಗಳಲ್ಲಿ ಬದಲಾಯಿಸುವ ಮತ್ತು ಮುನರ್ ನಿರೂಪಿಸುವ ಪ್ರಯತ್ನ ಈಗ ನಡೆದಿದೆ. ದಾರ್ಶನಿಕ ಜಾರ್ಜ್ ಸಂತಾಯನ ಹೇಳಿದಂತೆ "ಇತಿಹಾಸದಿಂದ ಪಾಠ ಕಲಿಯದವರು ಅದನ್ನು ಪುನರಾವರ್ತನೆ ಮಾಡುವಂತಹ ತಪ್ಪ ಮಾಡುತ್ತಾರೆ." ಚರಿತೆಯ ತಪ್ಪುಗಳ ಅರಿವಿನಿಂದ ನಮ್ಮ ವರ್ತಮಾನ ಮತ್ತು ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಬಹುದೆಂಬುದನ್ನು ಅವರು ಹೇಳುತ್ತಾರೆ. ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸುವುದು ಮತ್ತು ಉತ್ತೇಕ್ಷಿತ ಕಥನಗಳನ್ನು ತಮಗೆ ಬೇಕಾದಂತೆ ಅರ್ಥೈಸಿಕೊಂಡು, ವಿವೇಚನೆಯಿಲ್ಲದೇ ಪರಸರ ೪ ದ್ವೇಷ ಸಾಧಿಸುವಂತಹ ಈ ಕಾಲದಲ್ಲಿ ಆಧಾರಸಹಿತವಾಗಿ ಮತ್ತು ಸಮಚಿತ್ತದಿಂದ ಚಿಂತೆಯನ್ನು ಹಿನ್ನೋಡುವ ಪ್ರಸ್ತುತ ಮಸ್ತಕ ಒಂದು ಸಕಾಲಿಕ ಪ್ರಯತ್ನವೇ ಸರಿ.
ಅಬ್ರಹಾಂ ಇರಾಲೆಯವರ 'ದಿ ಲಾಸ್ಟ್ ಸಿಂಗ್: ದಿ ಲೈಫ್ ಅಂಡ್ ಟೈಮ್ಸ್ ಆಫ್ ಗಿ ಮುಘಲ್ಸ್' ಎಂಬ ಪುಸ್ತಕ, ರಫೀಕ್ ಏಕಾರಿಯಾ, ಇರ್ಫಾನ್ ಹಬೀಬ್ ಮತ್ತು ಆಸ್ಟರ್ ಆಲಿ ಇಂಜಿನಿಯರ್ ಅವರ ಬರಹಗಳನ್ನು ಅಧ್ಯಯನ ಮಾಡಿ, ಅಬ್ದುರ್ ರೆಹಮಾನ್ ಅವರ ಮಾತುಗಳನ್ನು ಉಲ್ಲೇಖಿಸಿ ಮುಸ್ಲಿಮರು ಭಾರತದಲ್ಲಿ ನೆಲೆಸಿದ ೧೨೦೦ ವರ್ಷಗಳ 2 ಚರಿತ್ರೆಯ ಅವಲೋಕನವನ್ನು ಮಾಡಿರುವ ೩೫ ಅಧ್ಯಾಯಗಳ ಪುಸ್ತಕವಿದು. ಈ ೩ ಪುಸ್ತಕದ ಮೊದಲ ಹದಿನೈದು ಅಧ್ಯಾಯಗಳಲ್ಲಿ ಮುಸ್ಲಿಮರು ಭಾರತಕ್ಕೆ ಬಂದು, ಈ ಯುದ್ಧಗಳನ್ನು ನಡೆಸಿ, ಅಂತಿಮವಾಗಿ ಸ್ಥಳೀಯರೇ ಆಗಿ ಇಲ್ಲಿನ ರಾಜಕೀಯ ಆಡಳಿತ ತ ಮತ್ತು ಸಂಸ್ಕೃತಿಗಳಿಗೆ ತಮ್ಮದೇ ವಿಶಿಷ್ಟ ಕೊಡುಗೆಗಳನ್ನು ನೀಡಿದ ಒಂದು ಸಾವಿರ ವರ್ಷಗಳ ಚರಿತ್ರೆಯನ್ನು ನಿರೂಪಿಸಲಾಗಿದೆ. ಮುಂದಿನ ಅಧ್ಯಾಯಗಳಲ್ಲಿ ಮುಸ್ಲಿಮರ ರ ಅನಾಥಪ್ರಜ್ಞೆಯ ವಿವಿಧ ಆಯಾಮಗಳನ್ನು ವಿಶದವಾಗಿ ಚರ್ಚಿಸಲಾಗಿದೆ.
ಒಡೆದು ಆಳುವ ತಂತ್ರವನ್ನು ಬ್ರಿಟಿಷರು ಬಳಸಿದರು. ಸಿಪಾಯಿ ದಂಗೆ/ಪ್ರಥಮ ಜೈ ಸ್ವಾತಂತ್ರ್ಯ ಹೋರಾಟದ ನಂತರ ಅದರಲ್ಲಿ ಪಾಲ್ಗೊಂಡವರು, ನಾಯಕತ್ವ ವಹಿಸಿದವರು - ಮುಸ್ಲಿಮರಾದ್ದರಿಂದ ಅವರಿಗೆ ಪೆಟ್ಟು ಬಿದ್ದಿತ್ತು. ಅಲ್ಲಿಂದಲೇ ಮುಸ್ಲಿಮರ ಅನಾಥಪ್ರಜ್ಞೆಯ ಬೀಜ ಮೊಳೆಯಲಾರಂಭಿಸಿತು. ಪರ್ಷಿಯನ್, ಅರೇಬಿಕ್ ಭಾಷೆಯ ಸ್ಥಾನದಲ್ಲಿ ಇಂಗ್ಲಿಷ್ ಬಂತು. ಮುಸ್ಲಿಮರು ಹಿಂದುಗಳಂತೆ ಇಂಗ್ಲಿಷ್ ಕಲಿಯಲಾಗದೆ ಹೋದರು. ಹಿಂದುಸ್ತಾನ ಇಂಡಿಯಾ ಆಯಿತು. ಅಧಿಕಾರಸ್ಥಾನದಲ್ಲಿದ್ದ ಮುಸ್ಲಿಮರನ್ನು ಕಿತ್ತುಹಾಕಲಾಯಿತು. ಮುಸ್ಲಿಮರ ಆಡಳಿತದಲ್ಲಿ ಶರಿಯತ್ ಕಾನೂನಿದ್ದು, ಹೀಗಾಗಿ ಮುಸ್ಲಿಂ ಪುರೋಹಿತಶಾಹಿ ಹೇಳಿದ್ದೇ ವ್ಯಾಖ್ಯಾನಿಸಿದ್ದೇ ನ್ಯಾಯವಾಗಿತ್ತು. ಬದಲಾಗುತ್ತಿದ್ದ ಕಾಲಮಾನದ ಅರಿವೇ ಇರಲಿಲ್ಲ. ಹ ಬ್ರಿಟಿಷರು ತಂದ ಆಧುನಿಕ ನ್ಯಾಯಪದ್ಧತಿಯಲ್ಲಿ ಅಹವಾಲು ಸಲ್ಲಿಸಲು ಅವಕಾಶವಿತ್ತು. 5. ಯಥಾಸ್ಥಿತಿ ಬದಲಾದಾಗಲೇ ಜನರಿಗೆ ಹಿಂದಿನ ಆಡಳಿತದ ತಪ್ಪುಗಳ ಅರಿವಾಗುವುದು. ಆದರೆ ಮುಂದೆ ಬಿಟಿಷರು ಸ್ಥಳೀಯವಾದ ಎಲ್ಲವನ್ನೂ ನಾಶ ಮಾಡಿ ಇಲ್ಲಿನ ಸಂಪತ್ತನ್ನೆಲ್ಲಾ , ತಮ್ಮ ದೇಶಕ್ಕೆ ಸಾಗಿಸಿ ಅನ್ಯಾಯ ಮಾಡಿದ್ದು ಇತಿಹಾಸದ ಇನ್ನೊಂದು ಮುಖ. ಸ್ವಾತಂತ್ರ್ಯ ಬಂದ ನಂತರದ ದೇಶವಿಭಜನೆಯಿಂದ ಭಾರತದಲ್ಲಿ ಉಳಿದವರು ಬಡಮುಸ್ಲಿಮರು, ಅದರಲ್ಲೂ ದಕ್ಷಿಣ ಭಾರತದ ಮುಸ್ಲಿಮರಿಗೆ ಪಾಕಿಸ್ತಾನಕ್ಕೆ ಹೋಗುವುದು ಅವರು - ಕಲ್ಪಿಸಿಕೊಳ್ಳಲೂ ಆಗದ ಸಂಗತಿಯಾಗಿತ್ತು. ಆನಂತರ ನಡೆದ ಶಾಬಾನು ಪ್ರಕರಣದಲ್ಲಿ = ಕಾಂಗ್ರೆಸ್‌ನವರು ಮುಸ್ಲಿಮರ ಮತಬ್ಯಾಂಕ್‌ಗಾಗಿ ಅವರನ್ನು ಓಲೈಸುವ ರಾಜಕೀಯ ಮಾಡಿದ್ದು, ಇದರಿಂದಾಗಿ ನಡೆದ ಕೋಮುಗಲಭೆಗಳು, ಮುಸ್ಲಿಮರು ಮುಖ್ಯವಾಹಿನಿಯಲ್ಲಿ - ಸೇರಿಕೊಳ್ಳದೇ ಪ್ರತ್ಯೇಕವಾಗಿಯೇ ಇದ್ದುದು, ಈಗಿನ ಬಿಜೆಪಿ ಸರ್ಕಾರದಲ್ಲಿ ಮುಸ್ಲಿಮರನ್ನು ಬಹಿರಂಗವಾಗಿಯೇ ಭಯೋತ್ಪಾದಕರೆಂದು ಬಿಂಬಿಸುತ್ತಿರುವುದು, ಇವೆಲ್ಲಾ ಮುಸ್ಲಿಮರ ಅನಾಥಪ್ರಜ್ಞೆಗೆ ಕಾರಣವಾಗಿದೆ ಎಂಬುದನ್ನು ವಿವರವಾಗಿ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.
ಮುಸ್ಲಿಂ ಉಗ್ರವಾದಿಗಳಿಂದ ಅವರು ಉಗ್ರವಾದಿಗಳಾಗಲು ಕಾರಣಗಳೇನು, - ತಾಲಿಬಾನಿಗಳಿಂದ ಭಾರತೀಯ ಮುಸ್ಲಿಮರ ಮೇಲೆ ಏನು ಪರಿಣಾಮವಾಗಿದೆ ಎಂಬುದರ ಬಗ್ಗೆ ಹೆಚ್ಚಿನ ಚರ್ಚೆಯಾಗಿಲ್ಲ. ಈ ಚರಿತ್ರೆ ನಮಗೆ ತಿಳಿದುದೇ ಆದರೂ ಮುಸ್ಲಿಮರಿಂದ ಹಿಂದೂಗಳಿಗೆ ಅನ್ಯಾಯವಾಗಿದೆಯೆಂದು ಈಗ ಅದಕ್ಕೆ ಪ್ರತೀಕಾರದ ಕ್ರಮ ತೆಗೆದುಕೊಳ್ಳುವತ್ತ ಸಾಗುತ್ತಿದೆ. ನಮ್ಮ ಈಗಿನ ಭಾರತ ಸಾಮಾಜಿಕ-ಧಾರ್ಮಿಕ-ರಾಜಕೀಯ ಧ್ರುವೀಕರಣವಾಗುತ್ತಿರುವುದಕ್ಕೆ ಎರಡೂ ಧರ್ಮಕೋಮಿನವರು ಕಾರಣರಾಗಿರುವುದರಿಂದ ಈ ಪುಸ್ತಕ ಜನರ ಕಣ್ಣು ತೆರೆಸುವಲ್ಲಿ ನೆರವಾಗಬಹುದೇನೋ ಎಂಬ ಆಶಯವಿಟ್ಟುಕೊಳ್ಳಬಹುದೇನೋ?
(ಕೃಪೆ: ಹೊಸಮನುಷ್ಯ, ಬರಹ : ಕೆ. ಪದ್ಮಾಕ್ಷಿ)
©2024 Book Brahma Private Limited.