ಪಠ್ಯದ ಭವಾವಳಿ

Author : ವಿಕ್ರಮ ವಿಸಾಜಿ

Pages 384

₹ 500.00




Year of Publication: 2020
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೆನಹಳ್ಳಿ, ವಿಜಯನಗರ, ಬೆಂಗಳೂರು- 560040

Synopsys

‘ಪಠ್ಯದ ಭವಾವಳಿ’ ಲೇಖಕ ವಿಕ್ರಮ ವಿಸಾಜಿ ಅವರ ಲೇಖನಗಳ ಸಂಕಲನ. ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಅವರು ಬೆನ್ನುಡಿ ಬರೆದು ‘ಈ ಕೃತಿಯು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಮತ್ತು ಕನ್ನಡದ ಬಗ್ಗೆ ಸಾಹಿತ್ಯದ ಬಗ್ಗೆ ಗಂಭೀರ ಕಾಳಜಿ ಇರುವ ಎಲ್ಲರೂ ಆಸಕ್ತಿಯಿಂದ ಮತ್ತು ಖುಷಿಯಿಂದ ಓದಬೇಕಾದ ಮಹತ್ವದ ಕೃತಿ. ‘ತಿರುಕ್ಕುರಳ್’ ನಿಂದ ‘ಟ್ರಾಫಿಕ್ ಸಿಗ್ನಲ್’ ಸಿನಿಮಾದ ವರೆಗೆ ಅನೇಕ ವಿಷಯಗಳ ಬಗ್ಗೆ ಲವಲವಿಕೆ ಹಾಗೂ ಖಚಿತವಾದ ತಿಳಿವಳಿಕೆಯಿಂದ ಬರೆದ ಲೇಖನಗಳು ಇಲ್ಲಿವೆ. ಸೂಕ್ಷ್ಮವಾದ ಓದು, ಯಾವುದೇ ಪಠ್ಯದ ಸಮರ್ಪಕವಾದ ಓದಿಗೆ ಬೇಕಾದ ತಯಾರಿ ಮತ್ತು ಅಲ್ಲಲ್ಲಿ ಮಿಂಚುವ ಒಳನೋಟಗಳಿಂದಾಗಿ ಈ ಬರಹಗಳು ತುಂಬಾ ಉಪಯುಕ್ತವಾಗಿವೆ’ ಎಂದಿದ್ದಾರೆ.

ಪಾರಿಭಾಷಿಕಗಳ ಹಾಗೂ ಸಿದ್ಧಾಂತಗಳ ಹೊರೆಗಳಿಲ್ಲದೆ ಗಹನವಾದ ವಿಷಯಗಳನ್ನು ಚರ್ಚಿಸುವ ರೀತಿಯು ಮೆಚ್ಚುಗೆ ಆಗುತ್ತದೆ. ಕೃತಿಯ ಜೀವಾಳವಿರುವುದು ಶೆಲ್ಡನ್ ಪೋಲಾಕ್, ಷ. ಶೆಟ್ಟರ್, ಮಹಾಶ್ವೇತಾದೇವಿ ಮುಂತಾದವರೊಂದಿಗೆ ವಿಸಾಜಿ ನಡೆಸಿರುವ ಸಂಭಾಷಣೆಗಳು. ಇವುಗಳು ಅನೇಕ ಒಳನೋಟಗಳಿಂದ ಕಿಕ್ಕಿರಿದಿವೆ. ಹಗುರ ಮಾತುಗಳು ಹಾಗೂ ಹರಟೆಗಳನ್ನು ಬದಿಗಿಟ್ಟು ಅಪೂರ್ವ ಪ್ರತಿಭಾವಂತರಿಂದ ಗಂಭೀರವಾದ ವಿಚಾರಗಳನ್ನು ಹೊಮ್ಮಿಸುವ ವಿಸ್ತಾರವಾದ ಓದು ಮತ್ತು ಚಿಂತನೆ ವಿಸಾಜಿಯವರಲ್ಲಿ ಇರುವುದರಿಂದ ಇದು ಸಾಧ್ಯವಾಗಿದೆ. ಗ್ರೀಕ್ ಕಾವ್ಯದ ಬಗ್ಗೆ, ಕೆ. ಬಿ. ಸಿದ್ಧಯ್ಯನವರ ಕಾವ್ಯದ ಬಗೆಗಿನ ಲೇಖನಗಳು ಮುಖ್ಯವಾಗಿವೆ. ಇಂದಿನ ತಲೆಮಾರು ನಿರೀಕ್ಷಿಸುವಂಥ ಓದುಗನಿಗೆ ತೆರೆದುಕೊಂಡ ಲವಲವಿಕೆಯ ಬರಹದ ಶೈಲಿಯನ್ನು ಅಷ್ಟೇನೂ ಆಕರ್ಷಕವಲ್ಲದ ವಿಮರ್ಶೆಯಂಥ ವಲಯಕ್ಕೂ ತಂದಿರುವ ವಿಸಾಜಿಯವರ ಪ್ರಯೋಗಶೀಲತೆ ಖುಷಿ ಕೊಡುತ್ತದೆ. ಕೃತಿಗಳ ಬಗೆಗಿನ ತಮ್ಮ ಖಚಿತ ಮೌಲ್ಯಮಾಪನವನ್ನು ಬಿಟ್ಟುಕೊಡದೆ ಇದನ್ನು ಅವರು ಸಾಧಿಸಿದ್ದಾರೆ ಎನ್ನುವುದು ಮುಖ್ಯ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

About the Author

ವಿಕ್ರಮ ವಿಸಾಜಿ

ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು.  ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಸೊಂಡೂರು, ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.  ಕನ್ನಡ ಸಾಹಿತ್ಯ ಪರಿಷತ್ತು ...

READ MORE

Related Books