'ಗಾದೆ ವೇದಕ್ಕೆ ಸಮಾನ' ಎಂಬ ಗಾದೆಯಲ್ಲಿ ಗಾದೆಗಳ ಬಗ್ಗೆ ಜನಕ್ಕಿರುವ ಗೌರವವು ವ್ಯಕ್ತವಾಗುತ್ತವೆ. ವೇದಗಳಲ್ಲಿ ಇಟ್ಟಿದ್ದು ನಂಬಿಕೆಯನ್ನೇ ಗಾದೆಗಳಲ್ಲಿಡ ಬೇಕಾದರೆ, ಗಾದೆಗಳು ನೀಡುವ ಅನುಭವದ ಸಾರವೇ ಅದಕ್ಕೆ ಕಾರಣ. ಗಾದೆಗಳ ಮಾತುಗಾರಿಕೆ ಯಾರದೋ ಬನದಾಗಿರಬಹುದಾದರೂ ಅದರ ಹಿಂದಿರುವ ಅರ್ಥ. ಒಂದು ಜನಾಂಗದ ಅನುಭವವನ್ನೇ ಸಂಗಹಿಸಿರುತ್ತದೆ. ಲಾರ್ಡ್ ರಸೆಗೆ ಗಾದೆಗಳಲ್ಲಿ "the wisdom of many and the wit of one" ಇರುತ್ತದೆ ಎನ್ನುತ್ತಾನೆ, ಜನರ ಅನುಭವ ಗಾದೆಗಳಲ್ಲಿ ಸೆರೆಸಿಕ್ಕಿರುತ್ತವೆ. "ಜನತೆಯ ಬಾಳನ್ನೆಲ್ಲ ಈ ನಾಲ್ಕು ನಾಲ್ಕು ಮಾತಿನ ವಾಕ್ಯಗಳು ಅಪ್ಪಿ, ಆಗಸ್ಟ್ ಸಾಗರವನ್ನೇ ಗುಟುಕರಿಸಿದಂತೆ ಆರಗಿಸಿ ಕೊಂಡಿರುತ್ತವೆ ಎಂಬ ಮಾತು ಸತ್ಯ. ಗಾದೆ ಒಂದು ಜನಾಂಗದ ನಿತ್ಯ ಮಾತಿನ ಅಂಗ. ಆದ್ದರಿಂದ ಒಬ್ಬ ವ್ಯಕ್ತಿ ಎಷ್ಟೇ ಸುಂದರವಾಗಿ ಒಂದು ಮಾತನ್ನು ಹೇಳಿದರೂ ಸಾರ್ವತ್ರಿಕ ಚಲಾವಣೆಯಿಲ್ಲದಿದ್ದರೆ ಅದನ್ನು ಗಾದೆ ಎನ್ನಲಾಗುವುದಿಲ್ಲ. 'ದಯೆಯಿಲ್ಲದ ಧರ್ಮವದೇವುದಯ್ಯ' (ಬಸವ - 247) - ಎಂಬಂತಹ ಮಾತುಗಳು ಈ ಕಾರಣಕ್ಕಾಗಿ ಗಾದೆಗಳೆನಿಸುವುದಿಲ್ಲ. (ಇಂತಹ ಮಾತುಗಳು ತುಂಬ ಜನಪ್ರಿಯವಾಗಿ ಮುಂದೆ ಗಾದೆಗಳ ಮಹತ್ವ ಪಡೆಯಬಹುದು. ಎಷ್ಟೋ ವೇಳೆ ಇಂತಹ ಮಾತುಗಳು ಹಲವರ ಕಾವ್ಯಗಳಲ್ಲಿ ಸಿಕ್ಕಿದಾಗ, ಇವು ಆ ಕಾಲದ ಗಾದೆಗಳೋ ಅಥವಾ ಕವಿಯ ಸ್ವಂತ ರಚನೆಯೋ ಎಂದು ಸಂದೇಹ ಉಂಟಾಗುತ್ತದೆ ಎಂದು ವಚನ ಸಮಸ್ತ ಕೃತಿಯ ಬಗ್ಗೆ ಪಿ.ವಿ ನಾರಾಯಣ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...
READ MORE