ಹಿರಿಯ ಸಾಹಿತಿ ಡಿ.ವಿ.ಜಿ ಅವರು ಬರೆದ ಲೇಖನಗಳ ಸಂಕಲನ- ರಾಜಕೀಯ ಪ್ರಸಂಗಗಳು-1. ರಾಜಕೀಯ ಒಂದು ಉದ್ಯಮವಾಗಿ ಪರಿವರ್ತನೆಯಾದರೆ ಅಪಾಯ ಎಂಬುದು ಡಿವಿಜಿ ಅವರ ಪ್ರತಿಪಾದನೆಯಾಗಿತ್ತು. ಹಣ ಗಳಿಸಲು ರಾಜಕೀಯಕ್ಕೆ ಬರಬಾರದು. ಸಾರ್ವಜನಿಕ ಸೇವೆಯಷ್ಟೇ ಇದರ ಉದ್ದೇಶ ಎಂಬುದು ಅವರ ವಾದ. ತಮ್ಮ ವಿಚಾಧಾರೆಗಳಿಗೆ ಪೂರಕವಾಗಿ ಹಾಗೂ ವಿರೋಧಾಭಾಸಗಳನ್ನು ಉಂಟು ಮಾಡುವ ಪ್ರಸಂಗಗಳನ್ನು ಕೃತಿಯಲ್ಲಿ ಕಾಣಿಸಿದ್ದು, ಅವರ ರಾಜಕೀಯ ದೃಷ್ಟಿಕೋನ ಗಮನ ಸೆಳೆಯುತ್ತದೆ.
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE