‘ತನುಕರಗದವರಲ್ಲಿ’ ಮಲ್ಲಿಕಾ ಘಂಟಿ ಅವರ ಲೇಖನಗಳ ಸಂಗ್ರಹವಾಗಿದೆ. ಆರೋಗ್ಯಕರ ಸ್ತ್ರೀವಾದಿ ಧೋರಣೆಯೊಂದು ರೂಪುಗೊಂಡಾಗ ಮಾತ್ರ 'ಲಿಂಗಾಧಾರಿತ ತಾರತಮ್ಯ'' ಹಿಮ್ಮೆಟ್ಟಿ ಆಕೆ ಬಯಸಿದ ಬಿಡುಗಡೆ ನೆಮ್ಮದಿ ಆಕೆಗೆ ದಕ್ಕಬಹುದೆಂಬ ವಿಚಾರ ಕೇವಲ ನಿರೀಕ್ಷೆಯಾಗಿರಬಾರದೆಂಬ ಆಶಯ ಈ ಲೇಖನಗಳಲ್ಲಿದೆ. ಕೆಲವರು ಸಾಮಾನ್ಯವಾಗಿ ತಿಳಿದಿರುವಂತೆ ಸ್ತ್ರೀವಾದ ಸ್ತ್ರೀಯರಿಂದ ಮಾತ್ರ ಸಾಧ್ಯ ಎಂಬ ಹುಸಿ ನಂಬಿಕೆಯತ್ತ ವಾಲದೆ ಪುರುಷ ವರ್ಗದ ಕೊಡುಗೆಯ ಮಹತ್ವವನ್ನೂ ಮನಗಂಡು ಚರ್ಚಿಸಲಾಗಿದೆ.
ಲೇಖಕಿ ಮಲ್ಲಿಕಾ ಘಂಟಿಯವರು ಏಪ್ರಿಲ್ 17, 1959ರಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಅಗಸಬಾಳದಲ್ಲಿ ಜನಿಸಿದರು. ತಂದೆ ಶಂಕರಪ್ಪ ತಾಯಿ ಪಾರ್ವತಿ ಬಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಹಂಗರಗಿ ಗ್ರಾಮ ಮತ್ತು ಬಾದಾಮಿಯಲ್ಲಿ ಪಡೆದ ಅವರು ವೀರ ಪುಲಿಕೇಶಿ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಮತ್ತು ಪಿ.ಯು ವರೆಗೆ ವಿದ್ಯಾಭ್ಯಾಸ ಮಾಡಿದರು. ಬಾಗಲಕೋಟೆ ಮತ್ತು ಜಮಖಂಡಿ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಬಿ.ಎ.ಪದವಿ. ಧಾರವಾಡದ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ ಕುರಿತು ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಬಿ ಎ, ಎಂ ...
READ MORE