ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಿದ ನಿಪುಣರಿಗೆ ಭಾರತ ನೆಲೆಯಾಗಿದೆ. ದಕ್ಷಿಣ ಭಾರತವು ಗಣಿತಲೋಕಕ್ಕೆ ನೀಡಿದ ಕೊಡುಗೆಯ ಬಗ್ಗೆ ವೇಣುಗೋಪಾಲ ದ.ಹೇರೂರ ಅವರ ಮಧ್ಯಯುಗೀನ ಗಣಿತಶಾಸ್ತ್ರಕ್ಕೆ ಎರಡನೇ ಮತ್ತು ಪರಿಷ್ಕೃತ ದಕ್ಷಿಣಭಾರತದ ಕೊಡುಗೆ ಆವೃತ್ತಿಯ ಈ ಪುಸ್ತಕ ಬೆಳಕು ಚೆಲ್ಲಿದೆ.
ಹಿಂದೂ ಹಾಗೂ ಆಧುನಿಕ ಗಣಿತಗಳೆರಡರಲ್ಲೂ ಸವಿವರವಾಗಿ ಅಧ್ಯಯನ ಮಾಡಿರುವ ವೇಣುಗೋಪಾಲ ಹೇರೂರ, ‘ಮಧ್ಯಯುಗೀನ ಗಣಿತಶಾಸ್ತ್ರಕ್ಕೆ ದಕ್ಷಿಣಭಾರತದ ಕೊಡುಗೆ’ ಅವರ ಗಣಿತಶಾಸ್ತ್ರದ ಕೃತಿ. ‘ಟಿ. ವಿ. ಕಪಾಲಿಶಾಸ್ತ್ರಿ’ ಸ್ಮಾರಕ ಪ್ರಶಸ್ತಿ ಲಭಿಸಿದೆ. ...
READ MOREಗಣಿತ ಪರಂಪರೆಯ ಆಳ ಮತ್ತು ವಿಸ್ತಾರ
ವಿಶ್ವದ ಗಣಿತಶಾಸ್ತ್ರಕ್ಕೆ ಭಾರತದ ಕೊಡುಗೆ ದೊಡ್ಡದು. ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಿದ ನಿಪುಣರಿಗೆ ಭಾರತ ನೆಲೆಯಾಗಿದೆ. ದಕ್ಷಿಣ ಭಾರತವು ಗಣಿತಲೋಕಕ್ಕೆ ನೀಡಿದ ಕೊಡುಗೆಯ ಬಗ್ಗೆ ವೇಣುಗೋಪಾಲ ದ.ಹೇರೂರ ಅವರ ಮಧ್ಯಯುಗೀನ ಗಣಿತಶಾಸ್ತ್ರಕ್ಕೆ ಎರಡನೇ ಮತ್ತು ಪರಿಷ್ಕೃತ ದಕ್ಷಿಣಭಾರತದ ಕೊಡುಗೆ ಆವೃತ್ತಿಯ ಈ ಪುಸ್ತಕ ಬೆಳಕು ಚೆಲ್ಲಿದೆ. ವೃತ್ತಿಯಿಂದ ಎಂಜಿನಿಯರ್ ಆದ ಇವರು, ಪ್ರಾಚೀನ ಭಾರತೀಯ ಗಣಿತಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ ಮಾಡಿದವರು. ‘ಭಾರತ ಮೂಲದ ವಿಜ್ಞಾನಾಂಗಗಳ ಸಾಧನೆ ಕುರಿತು ಯತಾರ್ಥ ಮಾಹಿತಿ ಪ್ರಸಾರಗೊಳ್ಳಬೇಕಾದ ಅಗತ್ಯ ಇದೆ' ಎನ್ನುವ ಲೇಖಕರು, ಗಣಿತಲೋಕಕ್ಕೆ ಸಂಬಂಧಿಸಿದಂತೆ ಸಂಸ್ಕೃತ ಸಾಹಿತ್ಯ ಮತ್ತು ಶ್ಲೋಕಗಳಲ್ಲಿನ ವಿಚಾರಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ. ಗಣಿತಾಸಕ್ತರು ಮತ್ತು ವಿದ್ಯಾರ್ಥಿಗಳಿಗೆ ಸರಳವಾಗಿ ಗಣಿತವನ್ನು ಅರ್ಥ ಮಾಡಿಸಲು ಮುಂದಾಗಿದ್ದಾರೆ. ಆದರೆ, ಸಂಸ್ಕೃತದ ನಂಟಿರದವರಿಗೆ ಇದು ಕಗ್ಗಂಟಿನಂತೆಯೇ ಕಾಣುತ್ತದೆ. ಸಂಖ್ಯಾಪದ್ಧತಿ, ಬೀಜಗಣಿತದ ಸಮೀಕರಣಗಳು, ಜ್ಯಾಮಿತೀಯ-ಬೀಜಗಣಿತ, ಚಕ್ರೀಯ-ಚತುರ್ಭುಜಗಳು, ಪೈ ಬೆಲೆ ಮತ್ತಿತರ ವಿಚಾರಗಳನ್ನು ವಿವರಿಸಲಾಗಿದೆ. ಪರಕೀಯರ ದಾಳಿಗೆ ದೇಶೀಯ ವಿಜ್ಞಾನ-ಗಣಿತ ಪರಂಪರೆಗಳು ಹಾಳಾದವು. ಆದರೂ, ಕೇರಳ ಮಾತ್ರ ಗಣಿತದ ವಿಷಯದಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದ್ದು ಈ ಅಂಶವನ್ನು ಚರ್ಚಿಸಲಾಗಿದೆ.
ಕೃಪೆ: ವಿಜಯಕರ್ನಾಟಕ, ನ್ಯೂ ಬುಕ್ (2020 ಜನವರಿ 12)