‘ದಿನಚರಿಯಿಂದ’ ಕೃತಿಯು ನಿರಂಜನ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಇಲ್ಲಿ ಓದುಗರಿಗೆ ಉಪಯುಕ್ತವಾಗಲೆಂದು ಲೇಖನಗಳನ್ನು ‘ವ್ಯಕ್ತಿಪ್ರಧಾನ’, ‘ರಾಷ್ಟ್ರ ನಾಡು’ ‘ಸರಕಾರ-ಸಾಹಿತ್ಯ’, ‘ಸರಸ-ಸಂಕಟ’, ಎಂದು ನಾಲ್ಕು ವಿಭಾಗ ಮಾಡಲಾಗಿದೆ. ಲೇಖನಗಳು ಪ್ರಕಟವಾದ ಕುರಿತು ಪ್ರತಿಯೊಂದು ಲೇಖನದ ಕೊನೆಗೆ ದಿನಾಂಕವನ್ನು ನಮೂದಿಸಲಾಗಿದೆ. ಈ ಕೃತಿಯು ವ್ಯಕ್ತಿ ಪ್ರಧಾನ ಹೂರಣದಲ್ಲಿ 42 ಅಧ್ಯಾಯಗಳನ್ನು, ರಾಷ್ಟ್ರ ನಾಡು ಹೂರಣದಲ್ಲಿ 29 ಅಧ್ಯಾಯಗಳನ್ನು, ಸರಕಾರ ಸಾಹಿತ್ಯ ಹೂರಣದಲ್ಲಿ 12 ಅಧ್ಯಾಯಗಳನ್ನು, ಸರಸ ಸಂಕಟ ಹೂರಣದಲ್ಲಿ 41 ಅಧ್ಯಾಯಗಳನ್ನು ಒಳಗೊಂಡಿದೆ.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE