ಕನ್ನಡದಲ್ಲಿ ಪಠ್ಯಪರಿಷ್ಕರಣ ಒಂದು ಕೈಪಿಡಿ

Author : ನೀರ್ಕಜೆ ತಿರುಮಲೇಶ್ವರ ಭಟ್ (ಎನ್.ಟಿ.ಭಟ್)

₹ 149.00




Year of Publication: 2020
Published by: ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್
Address: 5th Floor Advanced Research Centre, Manipala, Karnataka, Karnataka 576104
Phone: 08202922954

Synopsys

ಲೇಖಕ ನೀರ್ಕಜೆ ತಿರುಮಲೇಶ್ವರ ಭಟ್‌ ಅವರ ಕೃತಿ ʻಕನ್ನಡದಲ್ಲಿ ಪಠ್ಯಪರಿಷ್ಕರಣ- ಒಂದು ಕೈಪಿಡಿʼ. ಕನ್ನಡದಲ್ಲಿ ಕರಡಚ್ಚು ಪ್ರತಿಗಳನ್ನು ತಿದ್ದಿಕೊಟ್ಟ ಅನುಭವಗಳನ್ನು ತುಸು ವಿಸ್ತರಿಸಿ ಸಣ್ಣ ಕೈಪಿಡಿಯ ರೂಪದಲ್ಲಿ ತಂದರೆ ಒಳ್ಳೆಯದಲ್ಲವೇ ಎಂಬ ಆಲೋಚನೆ ಈ ಕಿರುಹೊತ್ತಗೆಯ ರಚನೆಯ ಮೂಲ. ಲೇಖಕ ಪಾದೇಕಲ್ಲು ವಿಷ್ಣು ಭಟ್ಟ ಅವರು ಪುಸ್ತಕದಲ್ಲಿ, “ಡಾ. ತಿರುಮಲೇಶ್ವರ ಭಟ್ಟರು ದೀರ್ಘಕಾಲ ಅನುವಾದಕ್ಷೇತ್ರದಲ್ಲಿ (ಇಂಗ್ಲಿಷ್‍ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್‍ಗೆ, ಜರ್ಮನ್‍ನಿಂದ ಇಂಗ್ಲಿಷ್‍ಗೆ, ಜರ್ಮನ್‍ನಿಂದ ಕನ್ನಡಕ್ಕೆ) ದುಡಿದವರು ಮತ್ತು ವಿವಿಧ ರೀತಿಯ ಪುಸ್ತಕಗಳ ಯೋಜನೆ, ಸಂಯೋಜನೆ, ಪುನರ್ನಿರೂಪಣೆ, ಸಂಪಾದನೆ ಮೊದಲಾದ ಕೆಲಸಗಳನ್ನು ಮಾಡಿದವರು. ಈಯೆಲ್ಲ ಕೆಲಸಗಳಲ್ಲಿ ಸತತವಾಗಿ ಒಳಗೊಂಡಿರುವುದು ಕರಡಚ್ಚು ತಿದ್ದುವ ಕೆಲಸ. ಯಾವುದೇ ಕಾರ್ಯಕ್ರಮದಲ್ಲಿದ್ದರೂ ಅದರ ಎಡೆಯೆಡೆಯ ಬಿಡುವಿನಲ್ಲಿ ಒಂದಿಷ್ಟು ಕರಡಚ್ಚು ತಿದ್ದುವ ಕೆಲಸವನ್ನು ಸತತವಾಗಿ ಮಾಡುತ್ತಲೇ ಬಂದವರು. ಪಠ್ಯಪರಿಷ್ಕರಣದ ಹಲವು ಹಂತಗಳನ್ನು ಚೆನ್ನಾಗಿ ಬಲ್ಲ ಅವರು ತಮ್ಮಲ್ಲಿರುವ ಮಾಹಿತಿಯನ್ನೂ ಅನುಭವವನ್ನೂ ಕ್ರೋಡೀಕರಿಸಿ ಕನ್ನಡದಲ್ಲಿ ಪಠ್ಯಪರಿಷ್ಕರಣದ ಆವಶ್ಯಕತೆಯೇನೆಂಬುದು ಸರಳವಾಗಿ ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ” ಎಂದು ಹೇಳಿದ್ದಾರೆ.

About the Author

ನೀರ್ಕಜೆ ತಿರುಮಲೇಶ್ವರ ಭಟ್ (ಎನ್.ಟಿ.ಭಟ್)
(15 November 1939)

ಲೇಖಕ ನೀರ್ಕಜೆ ತಿರುಮಲೇಶ್ವರ ಭಟ್ ಅವರು ಮೂಲತಃ ಬಂಟ್ವಾಳ ತಾಲೂಕಿನ ನೀರ್ಕಜೆಯವರು. ತಂದೆ - ನೀರ್ಕಜೆ ಮಹಾಲಿಂಗ ಭಟ್ಟ, ತಾಯಿ - ದೇವಕಿ ಅಮ್ಮ. ವಿಟ್ಲದ ವಿಠಲ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿ, ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಸೈನ್ಸ್ ಓದಿಕೊಂಡರು, ಅದೇ ಕಾಲೇಜಿನಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸದಲ್ಲಿ ಬಿ.ಎ ಪದವಿ ಪಡೆದರು. 1959ರಲ್ಲಿ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ, ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಗ್ರೋಸೆಸ್ ಶ್ಟ್ರಾಖ್ ಡಿಪ್ಲೋಮಾ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ.ಎಸ್.ಬಿ.ಶೋತ್ರಿ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಎಂ.ಜಿ.ಎಂ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ...

READ MORE

Related Books