ಬಿನ್ನಹಕ್ಕೆ ಬಾಯಿಲ್ಲವಯ್ಯ

Author : ಬಿ.ಆರ್. ಲಕ್ಷ್ಮಣರಾವ್

Pages 412

₹ 450.00




Year of Publication: 2023
Published by: ಸಿ.ವಿ.ಜಿ ಪಬ್ಲಿಕೇಷನ್ಸ್ಸ್
Address: ನಂ.277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು-560058.
Phone: 9341258142

Synopsys

‘ಬಿನ್ನಹಕ್ಕೆ ಬಾಯಿಲ್ಲವಯ್ಯ’ ಬಿ.ಆರ್‌ ಲಕ್ಷ್ಮಣ ರಾವ್‌ ಅವರ ರಚನೆಯ ಲೇಖನಗಳಾಗಿವೆ. ಕೃತಿ, ವಿದ್ಯಮಾನ, ವ್ಯಕ್ತಿ, ವಿಚಾರ-ಯಾವುದರ ಬಗ್ಗೆಯೂ ಇದಮಿತ್ಥಂ ಧೋರಣೆ ತಳೆಯದ ಅಥವಾ ಅಂತಹ ಧೋರಣೆ ಅವರ ಸ್ವಭಾವದಲ್ಲೇ ಇಲ್ಲದ ಕವಿ ಲಕ್ಷ್ಮಣರಾವ್ ಅವರ ಲೇಖನಗಳು ನಾವೆಲ್ಲ ಯಾವಾಗಲೂ ದೊಡ್ಡ ಮತ್ತು ಒರಟು ಧ್ವನಿಯಲ್ಲಿ ಸರ್ವಜರಂತೆ ಮಾತಾಡುತ್ತಾ ಏನೇನನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ಸೂಚಿಸುವುದರಿಂದ ಈವತ್ತಿನ ಸಾಂಸ್ಕೃತಿಕ ವಾತಾವರಣದಲ್ಲಿ ಮುಖ್ಯವಾಗುತ್ತವೆ. ವಾಸ್ತವದ ಎಲ್ಲ ಮಗ್ಗುಲುಗಳನ್ನೂ ಸ್ವೀಕರಿಸುತ್ತಲೇ, ಒಪ್ಪುತ್ತಲೇ, ತನ್ನ ಮನಸ್ಸನ್ನು ಸದ ಆರೋಗ್ಯವಾಗಿ, ಪ್ರಭುಲ್ಲವಾಗಿ, ನಿರ್ಮತ್ಸರವಾಗಿ ಇಟ್ಟುಕೊಂಡಿರುವ ಸಂವೇದನಾಶೀಲರೊಬ್ಬರು ಬರೆಯುವ ವೈಚಾರಿಕ, ವಿಮರ್ಶಾತ್ಮಕ ಬರಹಗಳು ಹೇಗೆ ಮೌಲಿಕವೂ. ಸಂವಹನಶೀಲವೂ ಆಗಿರಬಲ್ಲವೆಂಬುದಕ್ಕೆ ಈ ಸಂಗ್ರಹ ಒಂದು ಉತ್ತಮ ನಿದರ್ಶನ.

About the Author

ಬಿ.ಆರ್. ಲಕ್ಷ್ಮಣರಾವ್
(09 September 1946)

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...

READ MORE

Related Books