‘ಹೆಣ್ಣೇ, ನಿನ್ನಆರೋಗ್ಯ ಕಾಪಾಡಿಕೋ’ ಲೀಲಾವತಿ ದೇವದಾಸ್ ಅವರ ಲೇಖನ ಸಂಕಲನವಾಗಿದೆ. ಮಹಿಳೆಯರು ತಮ್ಮ ದೇಹದ ಬಗ್ಗೆ ತಳೆದಿರಬಹುದಾದ ನಿರ್ಲಕ್ಷ್ಯ ಹಾಗೂ ತಪ್ಪು ತಿಳುವಳಿಕೆಯನ್ನು ಸರಿಪಡಿಸುವಲ್ಲಿ ಲೇಖನಗಳು ಬಹಳಷ್ಟು ಸಹಾಯ ಮಾಡುತ್ತವೆ.
ವೃತ್ತಿಯಲ್ಲಿ ವೈದ್ಯರಾದ ಲೀಲಾವತಿ ದೇವದಾಸ್ ಅವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಬರಹಗಳ ಮೂಲಕವೇ ಕನ್ನಡಿಗರಿಗೆ ಪರಿಚಿತರಾಗಿರುವ ಇವರು ಜನಿಸಿದ್ದು 1930 ಮಾರ್ಚ್ 30ರಂದು. ವೈದ್ಯಕೀಯ ಶಿಕ್ಷಣದ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಪ್ರಮುಖ ಕೃತಿಗಳೆಂದರೆ ಸ್ತ್ರೀ ಸಂಜೀವಿನಿ, ಸ್ತ್ರೀ ಆರೋಗ್ಯ ಸಂರಕ್ಷಣೆ ಹೇಗೆ?, ಹೆರಿಗೆ, ಹೆಣ್ಣೇ ನಿನ್ನ ಆರೋಗ್ಯ ಕಾಪಾಡಿಕೊ, ಗರ್ಭಕೋಶದ ಕ್ಯಾನ್ಸರ್ ಅನ್ನು ದೂರವಿರಿಸಿ, ನಾನು ಗೌರಿಯ ಗರ್ಭಕೋಶ (ವೈದ್ಯಕೀಯ ಕೃತಿಗಳು), ಆಸ್ಪತ್ರೆಯಲ್ಲಿ ಹಾಸ್ಯ, ಮುಸುಕಿನ ಗುಡದ್ದು, ಕನ್ನಡ ವೈದ್ಯ ವಿಶ್ವಕೋಶ, ಬೈಬಲ್ಲಿನ ಅನಾಮಿಕ ಸ್ತ್ರೀಯರು ಮುಂತಾದವು. ಇವರಿಗೆ ಅತ್ತಿಮಬ್ಬೆ ...
READ MOREಹೊಸತು- ಅಕ್ಟೋಬರ್ -2003
ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಲೀಲಾವತಿ ದೇವದಾಸ್ ನಿನ್ನ ಆರೋಗ್ಯ ವೈದ್ಯ ಸಾಹಿತಿಯೂ ಆಗಿರುವುದು ಹೆಣ್ಣುಮಕ್ಕಳ ಸೌಭಾಗ್ಯವೆನ್ನಬೇಕು. ಮಹಿಳೆಯರು ತಮ್ಮ ದೇಹದ ಬಗ್ಗೆ ತಳೆದಿರಬಹುದಾದ ನಿರ್ಲಕ್ಷ್ಯ ಹಾಗೂ ತಪ್ಪು ತಿಳುವಳಿಕೆಯನ್ನು ಸರಿಪಡಿಸುವಲ್ಲಿ ಲೇಖನಗಳು ಬಹಳಷ್ಟು ಸಹಾಯ ಮಾಡುತ್ತವೆ. ಮನೆಯ ಒಳಗೂ ಹೊರಗೂ ದುಡಿಯ ಬೇಕಾದ ಒಬ್ಬ ಹೆಣ್ಣು ಎದುರಿಸಬೇಕಾದ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಸೊಗಸಾದ ಶೈಲಿಯಲ್ಲಿ ಪರಿಪೂರ್ಣವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.