ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಅವರ ಕೃತಿ-ಬಟ್ಟೆಯೊಳಗಿನ ಚಿತ್ತಾರ. ಇಲ್ಲಿಯ ಬಹುತೇಕ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹೆದ್ದಾರಿ, ದಾರಿಗುಂಟ ಹಾಗೂ ಒಳದಾರಿ ಎಂಬ ಮೂರು ವಿಭಾಗಗಳಲ್ಲಿ ಲೇಖಕಿಯು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಕೃತಿಗಳ ವಿಮರ್ಶಾ ಬರಹಗಳನ್ನು ‘ಹೆದ್ದಾರಿ’ ವಿಭಾಗದಲ್ಲಿ, ಅಭಿನಂದನಾ ಗ್ರಂಥ, ಆಕಾಶವಾಣಿ, ಸಂಪಾದನಾ ಕೃತಿ ಹೀಗೆ ವಿವಿಧ ಉದ್ದೇಶಗಳಿಗಾಗಿ ಬರೆದ ಬರಹಗಳನ್ನು ‘ದಾರಿಗುಂಟ’ ವಿಭಾಗದಲ್ಲಿ ಹಾಗೂ ವ್ಯಕ್ತಿಗತ ಓದು-ಅನುಭವಗಳನ್ನು ‘ಒಳದಾರಿ’ ವಿಭಾಗದಲ್ಲಿ ಸೇರಿಸಲಾಗಿದೆ ಎಂದು ಲೇಖಕಿಯು, ಒಟ್ಟು 38 ಬರಹಗಳ ಈ ಸಂಕಲನದ ಸ್ವರೂಪ ಕುರಿತು ಹೇಳುತ್ತಾರೆ. ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ಅವರು ಕೃತಿಗೆ ಬೆನ್ನುಡಿ ಬರೆದು ‘ಈ ಕೃತಿಯಲ್ಲಿ ಅನೇಕ ಮೌಲಿಕ ಕೃತಿಗಳನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ವಿಮರ್ಶಾ ಮಾರ್ಗ ತನ್ನ ಹಾದಿ ಬದಲಿಸಿದ ಹೊತ್ತಿನಲ್ಲಿ ಖುಷಿ ಕೊಡುವ, ಓದಿಸಿಕೊಳ್ಳುವ ಬರಹಗಳು ಈ ಕೃತಿಯ ಹಿರಿಮೆ. ಭಾಷೆಯು ಕೇವಲ ಆಕರ್ಷಕ ವಿನ್ಯಾಸವಲ್ಲ. ಪ್ರಾಮಾಣಿಕ ಅಭಿವ್ಯಕ್ತಿಯೂ ಆಗಿರಬೇಕು ಎಂಬುದನ್ನು ಸರಿಯಾಗಿ ಗ್ರಹಿಸಿಕೊಂಡು ಪ್ರತಿ ಅಕ್ಷರಗಳನ್ನು ಅಳೆದು ತೂಗಿ, ಅಕಾಡೆಮಿಕ್ ಒಳನೋಟ ಇಟ್ಟುಕೊಂಡು ಬರೆದಿದ್ದಾರೆ.’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ, ಕಾವ್ಯಶ್ರೀ ಮಹಾಗಾಂವಕರ ಮೂಲತಃ ಬೀದರನವರು. ‘ಸಿಕಾ’ ಎಂಬುದು ಇವರ ಕಾವ್ಯನಾಮ. ತಂದೆ ಬಿ.ಜಿ.ಸಿದ್ದಬಟ್ಟೆ, ತಾಯಿ ಯಶೋದಮ್ಮ ಸಿದ್ದಬಟ್ಟೆ. ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ. ಮೈಸೂರಿನ ನಿರ್ಮಲ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರಿನ ನಾರ್ಮ ಫೆಂಡ್ರಿಕ್ ಶಾಲೆಯಲ್ಲಿ ಮಾಧ್ಯಮಿಕ ಹಾಗೂ ಪದವಿಪೂರ್ವ ಶಿಕ್ಷಣ, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬೀದರಿನಲ್ಲಿ ಡಿಪ್ಲೊಮ ಇನ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರೆ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರೆ. . ಕೃತಿಗಳು: 'ಪ್ರೇಮ ಕಾವ್ಯ' (2006) ಕಾದಂಬರಿ, 'ಬೆಳಕಿನೆಡೆಗೆ' (2008) ಕಥಾ ಸಂಕಲನ , ಪ್ರಳಯದಲ್ಲೊಂದು ಪ್ರಣತಿ' (2013) ಕಥಾ ಸಂಕಲನ, 'ಜೀವಜಗತ್ತಿಗೆ ಜೇನಹನಿ' (2015) ವಿಮರ್ಶಾ ಬರಹ , ಪಿಸುಮಾತುಗಳ ...
READ MORE