`ಯಾಲಕ್ಕಿ ಗೊಂಚಲು' ವಿರೂಪಾಕ್ಷಪ್ಪ ಕೋರಗಲ್ಲ ಅವರ ಕೃತಿಯಾಗಿದೆ. ಮೂಗನ ಬದುಕಿನ ಕನ್ನಡಿಯಲ್ಲಿ ಜಾಗತೀಕರಣದ ಚಿಂಬವನ್ನು ಯಶಸ್ವಿಯಾಗಿ ತೋರಿಸಿಕೊಡುವ ಲೇಖಕರು ಪ್ರಾದೇಶಿಕ ಪ್ರೀತಿಯಿಂದಾಗಿ ಆ ಕೊಟ್ಟೂಲಿನ ಗುಡ್ಡ ಬೆಟ್ಟಗಳ ನಡುವಿನ ಬಿಸಿಲು ನಾಡಿನಲ್ಲಿ ಅಡ್ಡಾಡಿಸುವಾಗ ಓದುಗರಿಗಿಂತ ತಾವೇ ಹೆಚ್ಚು ಖುಷಿ ಪಟ್ಟಿದ್ದಾರೆ. ಹಾಗಂತ ಅವರು ಕತೆಯಲ್ಲಿ ಒಂದು ಪಾತ್ರವಾಗಿ ನಿಲ್ಲುವುದಿಲ್ಲ. ಕಥೆಯ ಹೊರಗಿದ್ದಕೊಂಡೇ ಮೂಗನೆಂಬ ಸಾತ್ವಿಕ ಮುಗ್ಧ ಮನುಷ್ಯನೊಬ್ಬ ಕೊಟ್ಟೂರು ಮತ್ತು ಸುತ್ತು-ಮುತ್ತ ಓಡಿಯಾಡುವುದನ್ನು ತೋರಿಸಿ ಕೊಡುತ್ತಾರೆ. ಆ ಮೂಗ ಮಾತಾಡುವ ಭಾಷೆ ಮಾತ್ರ ಕಥಾ ನಾಯಕನದಾಗಿರದೆ ಕಥೆಗಾರನ ಭಾಷೆಯೆಂಬುದು ಸ್ಪಷ್ಟವಾಗುತ್ತದೆ. ಒಬ್ಬ ಲೇಖಕನಿಗೆ ತನ್ನದೆ ಆದ ಭಾಷೆಯಲ್ಲಿ ಬರೆಯುವಾಗ ಖುಷಿಯಾಗುತ್ತದೆ. ಲೇಖಕ ತನ್ನ ಪ್ರದೇಶ ಬಿಟ್ಟು ಹೋಗಿ ಎಷ್ಟೋ ಕಾಲವಾಗಿದ್ದರೂ ಅವನು ಪ್ರಾದೇಶಿಕ ಪ್ರೀತಿಯಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾನೆ. ಗೋಕಾಕರು ಇಂಗ್ಲೆಂಡಿನಲ್ಲಿದ್ದುಕೊಂಡು ಬರೆಯುವಾಗಲೂ ಸವಣೂರು ಶಿರಹಟ್ಟಿ ಭಾಷೆಯಲ್ಲಿಯೇ ಬರೆದರಂತೆ.
ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಅವರು ಕೊಪ್ಪಳ ಜಿಲ್ಲೆಯ ವದಗನಹಾಳ ಗ್ರಾಮದವರು. ಅಪ್ಪಟ ಮೊಘಲಾಯಿಯ ಗ್ರಾಮೀಣ ಪ್ರತಿಭೆ. ಎರಡನೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದರು. ಗವಿಮಠದಲ್ಲಿ ಶಿಕ್ಷಣ ಪೂರೈಸಿ 30 ವರ್ಷಗಳಿಂದ ಜೈನ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡುತ್ತ ಬಂದಿದ್ದಾರೆ. ಓದುವಿಕೆ ಅವರ ಹವ್ಯಾಸ. ಸಣ್ಣ ಕತೆ ಅವರ ಆರಂಭದ ಸಾಹಿತ್ಯ ಪ್ರಕಾರ. ಕತೆ, ಪುರಾಣ ಕಾವ್ಯ ರಚನೆ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತದ ಪ್ರಾಧ್ಯಾಪಕರಾಗಿ, ಗಣಿತದ ಸಂಶೋಧನೆಯನ್ನು ಕನ್ನಡದಲ್ಲಿ ಮಾಡಿದ್ದಾರೆ. ಕೃತಿಗಳು: ಮುತ್ತಿನ ಚಿಪ್ಪಿನ ಸೂತ್ರಗಳು, ಭೂ ಅಳತೆಯಕ್ಷೇತ್ರ ಗಣಿತ, ಕಾವೇರಿಯಿಂದ ಗೋದಾವರಿವರೆಗೆ, ರಾಜಾದಿತ್ಯ, ನಾಯಿ ...
READ MORE