ತಾಯಿಯ ಮಮತೆಯ ಮೆಲುಕು ತುರುವನೂರು ಮಲ್ಲಿಕಾರ್ಜುನ ಅವರ ಸಂಪಾದನೆಯ ಕೃತಿಯಾಗಿದೆ. ಈ ವಿಶೇಷ ಪುಸ್ತಕ 120 ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ತಾಯಂದಿರಿಗೆ ಬರೆದ ಪತ್ರಗಳ ಸಂಕಲನ ಮತ್ತು ಆ ಪತ್ರಗಳಿಗೆ ಅಮ್ಮಂದಿರ ಪ್ರತಿಕ್ರಿಯೆಗಳನ್ನು ಒಳಗೊಂಡಿದೆ! ಅಲ್ಲದೆ ಅಮ್ಮ ಮಕ್ಕಳ ಭಾವಚಿತ್ರಗಳೂ ಇಲ್ಲಿವೆ. ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ವೈಯಕ್ತಿಕ ಮಾತು- ಕಥೆಗಳೆಲ್ಲಾ ಜಂಗಮವಾಣಿಯ ಮೂಲಕವೇ ಸಾಗುತ್ತಿರುವುದರಿಂದ ಪತ್ರ ಬರೆವ ಅಗತ್ಯಗಳು ಮಸುಕಾಗಿವೆ.ತೀರಾ ವಿರಳವಾಗಿವೆ. ಪರೀಕ್ಷೆಗಳಲ್ಲಿ, ಪತ್ರಿಕೆಗಳಲ್ಲಿ ಮತ್ತು ವ್ಯವಹಾರಗಳಲ್ಲಿ ಮಾತ್ರ ಪತ್ರಲೇಖನ ಉಳಿದುಕೊಂಡಿದೆ. ಹಾಗಾಗಿ ವಿದ್ಯಾರ್ಥಿಗಳು ಬರೆದ ಈ ಪತ್ರಗಳ ಸಂಕಲನದ ಪುಸ್ತಕ ತುಂಬಾ ವಿಶೇಷವೆನಿಸುತ್ತದೆ. ಅಲ್ಲದೆ ಒಂದೇ ಬಾರಿಗೆ 120 ಉದಯೋನ್ಮುಖ ಬರಹಗಾರರ ಸಾಮೂಹಿಕ ಸೃಷ್ಟಿ ವಿಸ್ಮಯ ಮೂಡಿಸುತ್ತದೆ.
ಲೇಖಕ ತುರುವನೂರು ಮಂಜುನಾಥ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ತುರುವನೂರಿನವರು. ತಂದೆ ತಿಪ್ಪೇಸ್ವಾಮಿ ತಾಯಿ ಜಯಮ್ಮ ರೈತ ಕುಟುಂಬದಿಂದ ಬಂದವರು. ಹುಟ್ಟೂರಿನಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ ಪಡೆದರು. ಸ್ನಾತಕೋತ್ತರ ಪದವೀಧರರು. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಚಿತ್ರದುರ್ಗದ ಮುರುಘಾ ಮಠದಿಂದ ಪ್ರಕಟವಾಗುತ್ತಿದ್ದ ‘ಜನವಾಹಿನಿ’ (!992) ವರದಿಗಾರನಾಗಿ ವೃತ್ತಿ ಆರಂಭಿಸಿದರು. (1994ರಲ್ಲಿ) ಚಿತ್ರದುರ್ಗದ ‘ಸುದ್ದಿಗಿಡುಗ’ ಪತ್ರಿಕೆ, 1996ರಿಂದ 2007ರವರೆಗೆ ಸಂಯುಕ್ತ ಕರ್ನಾಟ ಪತ್ರಿಕೆ ಬೆಂಗಳೂರಿನಲ್ಲಿ ವರದಿಗಾರರಾಗಿ, ನಂತರ ಸುವರ್ಣ ಟಿವಿಗೆ ಸೇರ್ಪಡೆ ಎಫ್ ಐಆರ್ ಕ್ರೈಮ್ ನ್ಯೂಸ್ ಪ್ರೋಗ್ರಾಂ ಮುಖ್ಯ ವರದಿಗಾರಿಕೆ, ಕೋರ್ಟ್ ವರದಿ ಸ್ಪೆಷಲ್ ರಿಪೋರ್ಟ್ ಕಾರ್ಯಕ್ರಮ ನಿರೂಪಣೆ 2010 ಫೆಬ್ರವರಿಯಿಂದ ಹಿರಿಯ ...
READ MORE