`ನುಡಿಗಜ್ಜಾಯ’ ಸೃಜನ್ ಗಣೇಶ್ ಹೆಗಡೆ ಅವರ ನುಡಿಗಳ ಸಂಕಲಿತ ಕೃತಿಯಾಗಿದೆ. ಸೃಜನಾಲೋಚನ ಕಾವ್ಯನಾಮದ ಮೂಲಕ ಸದಾ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸೃಜನ್ ಗಣೇಶ್ ಹೆಗಡೆ ಅವರು ಬರೆದ 1111ನುಡಿಗಳ ಸಂಕಲಿತ ಕೃತಿ ಇದಾಗಿದ್ದು, ಬದುಕು ಭಾವದ ಕುರಿತಾದ ಸ್ಪಷ್ಟ ಮತ್ತು ಚಿಂತನೀಯ ಉಕ್ತಿಗಳು ಎರಕಗೊಂಡು ಸೃಷ್ಟಿಯಾದ ಈ ಕೃತಿಯು ಅಪೂರ್ವವಾದದ್ದು.
ಸೃಜನ್ ಗಣೇಶ ಹೆಗಡೆ ಅವರ ಕಾವ್ಯನಾಮ -ಸೃಜನಾಲೋಚನ. ತಂದೆ- ಶ್ರೀಧರ್ ಹೆಗಡೆ ತಾಯಿ- ಜಯಲಕ್ಷ್ಮಿ ಹೆಗಡೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಗುಬ್ಬಿಗ ಗ್ರಾಮದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು.ಯಕ್ಷಗಾನ ಭಾಗವತಿಕೆ, ತತ್ವಶಾಸ್ತ್ರ, ಅಧ್ಯಾತ್ಮ ವೈಚಾರಿಕತೆ, ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತಿ. ಇದೆ. ಕೃತಿಗಳು- ಗೊಂಬೆಯ ಸಂಕಟ, ರಾಧಾಸ್ನೇಹಿ, ಅನಂತ ಸೋಪಾನ(ಕವನ ಸಂಕಲನ) ಆಪ್ತ ಬಂಧನ, ಗೋಜಗಾಮೃತ (ಯಕ್ಷಗಾನ ಪ್ರಸಂಗಗಳು) . ...
READ MORE