ನಾಗೇಶ ಹೆಗಡೆ ಅವರ ಕೃತಿ ಪೂಚಂತೇ ಗ್ರೇಟ್ ಯಾಕಂತೆ?. ತೇಜಸ್ವಿ ಎಂದರೆ ಏನೆಂದುಕೊಂಡಿರಿ? ಸೂಕ್ಷ್ಮ ಗ್ರಹಿಕೆಯ ಸಾಹಿತಿ ಅಷ್ಟೇ ಅಲ್ಲ; ಅವರೊಳಗೊಬ್ಬ ಸಾಮಾಜಿಕ ಚಿಂತಕ ಇದ್ದ: ಛಾಯಾಗ್ರಾಹಕ ಇದ್ದ: ಚಿತ್ರಕಾರನಿದ್ದ, ಚರಿತ್ರಕಾರನಿದ್ದ, ರೈತನಿದ್ದ. ಅಲೆಮಾರಿಯಿದ್ದ. ನಿಸರ್ಗವಿಜ್ಞಾನಿ ಇದ್ದ, ಆಧುನಿಕ ತಂತ್ರಜ್ಞಾನಕ್ಕೆ ತುಡಿಯುವ ಪ್ರಕಾಶಕನಿದ್ದ, ಎಲ್ಲಕ್ಕಿಂತ ಮುಖ್ಯವಾಗಿ ಜೀವಲೋಕದ ನಾಡಿಮಿಡಿತವನ್ನು ಅರಿತಿದ್ದ ಪರಿಸರ ಪ್ರೇಮಿಯಿದ್ದ. ಕನ್ನಡಕ್ಕೆ ದಕ್ಕಿದ ಈ ಬಹುಮುಖ ವ್ಯಕ್ತಿಯ ಎಲ್ಲ ಮುಖಗಳನ್ನು ನಾವು ಮತ್ತೊಮ್ಮೆ ಮಗದೊಮ್ಮೆ ನೆನಪಿಸಿಕೊಳ್ಳಬೇಕಿದೆ. ಅವರ ಬಿಂಬ ಮಾಸದಂತೆ ಮಸಕಾಗದಂತೆ ನೋಡಿಕೊಳ್ಳಬೇಕಿದೆ. ನಾಗೇಶ ಹೆಗಡೆ ಈ ಸಂಕಲನದಲ್ಲಿ ಪೂಚಂತೇ ಅವರ ತುಡಿತಗಳ ವಿವರಣೆ ಕೊಟ್ಟು, ಕೊಂಚ ವಿಸ್ತರಣೆಯನ್ನೂ ಮಾಡಿದ್ದಾರೆ. ಪೂಚಂತೆ ಬರೆಯದೇ ಇದ್ದ. ಬರೆಯಬಹುದಾಗಿದ್ದ ನಿಸರ್ಗ ವಿದ್ಯಮಾನಗಳ ನಿರೂಪಣೆ ಇಲ್ಲಿದೆ. -(ಬೆನ್ನುಡಿಯಿಂದ)
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...
READ MORE