ಚಿಂತಕ ಅ.ನ.ಕೃಷ್ಣರಾಯರು ಸಂಪಾದಿತ ಕೃತ-ಭಾರತೀಯ ಸಾಹಿತ್ಯ ದರ್ಶನ. ಭಾರತೀಯ ಸಂಸ್ಕೃತಿಯ ವಿವಿಧ ಆವಿಷ್ಕಾರಗಳ ಸಮಗ್ರ ಪರಿಚಯ ಮಾಡಿಕೊಡುವ ಗ್ರಂಥವಿದು. ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ (ನವರತ್ನ ರಾಮರಾವ್), ಉಪನಿಷತ್ತುಗಳು (ಭಾಸ್ಕರಪಂತ್ ಶ್ರೀ ಸುಬ್ಬ ನರಸಿಂಹ ಶಾಸ್ತ್ರಿ), ಸ್ಮೃತಿಗಳು (ಎಂ.ಜಿ. ನಂಜುಂಡಾರಾಧ್ಯ), ಷಡ್ದರ್ಶನಗಳು (ನಾಗೇಶ ಶಾಸ್ತ್ರಿ), ಬೌದ್ಧ ಧರ್ಮ (ಜಿ.ಪಿ. ರಾಜರತ್ನಂ), ಭಾರತದಲ್ಲಿ ಪರಧರ್ಮ ಸಹಿಷ್ಣುತೆ( ಜಿ. ಹನುಮಂತರಾವ್), ಭಾರತೀಯ ಸಾಮಾಜಿಕ ಜೀವನ (ಸಿ.ಕೆ. ವೆಂಕಟರಾಮಯ್ಯ), ಭಾರತೀಯ ಸಂಸ್ಕೃತಿಗೆ ಇಸ್ಲಾಂ ಕಾಣೀಕೆ (ಮಧುಗಿರಿ ವಾಸುದೇವ ಮೂರ್ತಿ), ಸಂಸ್ಕೃತ ಮಹಾಕಾವ್ಯ ಪರಂಪರೆ (ಎಚ್.ವಿ. ನಾರಾಯಣ ಶಾಸ್ತ್ರಿ) ಸೇರಿದಂತೆ ವಿವಿಧ ಚಿಂತಕರ ಒಟ್ಟು 42 ಬರಹಗಳನ್ನು ಒಳಗೊಂಡಿದ ಸಂಕಲನವಿದು.
‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...
READ MORE