ಲೇಖಕಿ ರಾಜಶ್ರೀ ಟಿ ರೈ ಪೆರ್ಲ ಅವರ ಲೇಖನಗಳ ಸಂಕಲನ ಕಲ್ಪತರು. ಕಾಸರಗೋಡಿನ ನಾಟಿ ಔಷಧೀಯ ಪರಂಪರೆಯನ್ನು ತಿಳಿಹೇಳುವ ಸಂಕಲನವಿದು. ಲೇಖಕಿ ಕೃತಿಯ ಬೆನ್ನುಡಿಯಲ್ಲಿ ಬರೆದಿರುವಂತೆ ಭಾರತೀಯ ವೈದ್ಯ ಪರಂಪರೆಯ ಮೂಲ ತಳಹದಿ ಪಾರಂಪರಿಕ ನಾಟಿ ವೈದ್ಯಕೀಯ ಪದ್ಧತಿ. ಈ ವಿಚಾರದಲ್ಲಿ ಗಡಿನಾಡು ಕಾಸರಗೋಡಿನದು ಸುದೀರ್ಘ ಇತಿಹಾಸವಿದೆ. ಈ ನಿಟ್ಟಿನಲ್ಲಿ ಸುಮಾರು ನಾಲ್ಕೈದು ತಲೆಮಾರುಗಳ ಸ್ವಾರ್ಥರಹಿತ ಸೇವೆಯನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ. 60 ಪ್ರಾದೇಶಿಕವಾಗಿ ಬೆಳೆಯುವ ಔಷಧೀಯ ಸಸ್ಯಗಳ ಸ್ಥಳೀಯ ಹೆಸರಿನ ಜೊತೆಗೆ ಪರಿಚಯವೂ ಈ ಕೃತಿಯಲ್ಲಿದೆ.
ಗಡಿನಾಡು ಕಾಸರಗೋಡಿನ ತುಳು, ಕನ್ನಡ, ಹವ್ಯಕ ಭಾಷೆಯ ಯುವ ಲೇಖಕಿ. ಇತ್ತೀಚೆಗಷ್ಟೇ ತುಳುನಾಡಿನ ಮೂರಿಗಳ ಆರಾಧನೆ ಎಂಬ ಸಂಶೋಧನಾ ಕೃತಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಬಿಡುಗಡೆ ಕಂಡಿದೆ. ತುಳು ಸಾಹಿತ್ಯ ಕ್ಷೇತ್ರಕ್ಕೆ ಕಾದಂಬರಿಗಾರ್ತಿಯಾಗಿ ಚಿರಪರಿಚಿತೆ. ತುಳುವಿನಲ್ಲಿ ನಾಲ್ಕು ಕಾದಂಬರಿಗಳು(ಪನಿಯಾರ, ಬಜಿಲಜ್ಜೆ, ಕೊಂಬು,ಚೌಕಿ) ,ಒಂದು ಕಥಾಸಂಕಲನ(ಚವಳೊ) ಮತ್ತು ಒಂದು ಕವನ ಸಂಕಲನ(ಮಮಿನದೊ-ಆಕೃತಿ ಆಶಯ ಪ್ರಕಾಶನ ಮಂಗಳೂರು ) ಪ್ರಕಟಿತ. ಕನ್ನಡದಲ್ಲಿ ಪಾರಂಪರಿಕ ವೈದ್ಯ ಪದ್ಧತಿಯ ಬಗ್ಗೆ ಪ್ರಾದೇಶಿಕ ಅಧ್ಯಯನ ಕೃತಿ(ಕಲ್ಪತರು) ಪ್ರಕಟಿತ. ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕಥೆಗಳ ಸಂಕಲನ ಅಗ್ಗಿಷ್ಟಿಕೆ(ಕಲ್ಪವೃಕ್ಷ ಪ್ರಕಾಶನ ಬೆಂಗಳೂರು) ಚೊಚ್ಚಲ ಕನ್ನಡ ಕಥಾಸಂಕಲನವಾಗಿದೆ. ...
READ MORE