‘ಮಣಿಪುರದ ದುರಂತ ಕಥನ’ ಶಿವಸುಂದರ್ ಅವರ ಕೃತಿಯಾಗಿದೆ. ತನ್ನ ಗಾಯಗಳನ್ನು ಉಪಚರಿಸುವುದರಲ್ಲಿ ಮತ್ತು ಮಣಿಪುರದ ದುರಂತ ಮೇ 15ರಂದು ಮೈತೆಯಿಗಳು ತನ್ನ ಮೇಲೆ ನಡೆಸಿದ ಲೈಂಗಿಕ ದಾಳಿಯ ಭಯಾನಕ ನೆನಪುಗಳನ್ನು ಅದುಡುವುದರಲ್ಲೇ ಹೋಕಿಪ್ ದಿನದ ಬಹುತೇಕ ಸಮಯ ಕಳೆಯುತ್ತಿದ್ದಳು. ಒಮ್ಮೊಮ್ಮೆ ರಾತ್ರಿ ಮಲಗಿದ್ದಾಗ ಕೆಲವು ಪುರುಷರು ಬಂದೂಕುಗಳನ್ನು ತನ್ನ ಹಣೆಗಿಟ್ಟಂತೆ ಕನಸು ಕಂಡು ಚಿಟ್ಟನೆ ಚೀರುತ್ತಾ ನಿದ್ದೆಯಿಂದೆದ್ದು ಬಿಡುತ್ತಿದ್ದಳು. ಮೈಮೇಲಿದ್ದ ಗಾಯಗಳು ಬಹುತೇಕ ಒಣಗಿವೆ; ಆದರೆ ಗಾಯದ ಗುರುತುಗಳು ಮಾತ್ರ ಇನ್ನೂ ಹಾಗೇ ಇವೆ, ಎಂದು ಆಕೆ ಹೇಳಿದಳು. ಇದು ಹೊಕಿಪ್ ಒಬ್ಬಳ ಕತೆಯಲ್ಲ. ಮಣಿಪುರದ ಇಂಫಾಲ್ ಕಣಿವೆಯಲ್ಲಿ ಪ್ರಬಲವಾಗಿರುವ ಮೈತ್ರೇಯಿ ಸಮುದಾಯ ಹಾಗೂ ಗುಡ್ಡಗಾಡು ಜಿಲ್ಲೆಗಳಲ್ಲಿ ಪ್ರಬಲವಾಗಿರುವ ಕುಕಿ-ಜೋಮಿ ಸಮುದಾಯಗಳ ನಡುವೆ 2023 ಮೇ 3ನೇ ತಾಲೀಖು ಜನಾಂಗೀಯ ಸಂಘರ್ಷ ಭುಗಿಲೆದ್ದಾಗಿನಿಂದ ಅನೇಕ ಮಹಿಳೆಯರು ಆಕೆಯಂತೆಯೇ ಲೈಂಗಿಕ ಹಿಂಸೆಗೆ ಬಲಿಯಾಗಿದ್ದಾರೆ.
ಚಿಂತಕ, ಬರಹಗಾರ ಶಿವಸುಂದರ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹುಟ್ಟಿದ್ದು 1967 ಜನವರಿ 4ರಂದು. ಗೌರಿ ಲಂಕೇಶ್ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಇವರು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಚಾರ್ವಕ, ಖೈರ್ಲಾಂಜಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE