‘ಗಾಂಧಿಯಿಂದ.. ಗಾವ್ಲಿ ತನಕ’ ಶ್ರೀನಿವಾಸ ಜೋಕಟ್ಟೆ ಅವರ ಲೇಖನಗಳ ಸಂಗ್ರಹವಾಗಿದೆ. ಅಪಾಯದತ್ತ ಹೊರಟಿರುವ ಸಂಗತಿಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಅಪರಾಧ ಜಗತ್ತಿನ ಹಲವು ಮುಖಗಳ ಪರಿಚಯ ಮಾಡಿಸುತ್ತಾ ಇಂದು ನಾವಿರುವ ಪರಿಸರ-ಸಂಸ್ಧೃತಿ ಎಷ್ಟು ಮಲಿನವಾಗಿದೆ ಎಂದು ಪರಿಚಯಿಸಿದ್ದಾರೆ.
ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ. ...
READ MOREಹೊಸತು ಮೇ- 2001
ಕಣ್ಣೆರೆದಲ್ಲೆಲ್ಲ ಅಸಹನೀಯ ಕೃತ್ಯಗಳೇ ಗೋಚರಿಸುತ್ತಿರುವ ಇಂದಿನ ಬದಲಾದ ಸಂಸ್ಕೃತಿಯ ಸಂದರ್ಭದಲ್ಲಿ ಕಣ್ಮುಚ್ಚಿ ಕೂರದೆ ಧೈರ್ಯವಾಗಿ ಪತ್ರಿಕಾ ಮಾಧ್ಯಮದ ಮೂಲಕ ಲೇಖನಗಳನ್ನು ಬರೆಯುತ್ತಿರುವ ಜೋಕಟ್ಟೆ ಅವರ ಹರಿತ ಲೇಖನಿಯಿಂದ ಮಾಹಿತಿಗಳ ಮಹಾಪೂರವೇ ಹರಿಯುತ್ತಿದೆ. ಅಪಾಯದತ್ತ ಹೊರಟಿರುವ ಸಂಗತಿಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಅಪರಾಧ ಜಗತ್ತಿನ ಹಲವು ಮುಖಗಳ ಪರಿಚಯ ಮಾಡಿಸುತ್ತಾ ಇಂದು ನಾವಿರುವ ಪರಿಸರ-ಸಂಸ್ಕೃತಿ ಎಷ್ಟು ಮಲಿನವೆಂದು ಮನಗಾಣಿಸುತ್ತಾರೆ.