ಲೇಖಕ ನ.ರವಿಕುಮಾರ್ ಅವರ ಸಂಪಾದಿತ ಕೃತಿ ‘ನೆಲಕ್ಕೆ ಬಿದ್ದ ನಕ್ಷತ್ರ’. ಈ ಕೃತಿಯಲ್ಲಿ ಸುನಂದಾ ಪ್ರಕಾಶ ಕಡಮೆಯವರು ಬೆನ್ನುಡಿ ಬರೆದಿದ್ದು, ಖಲೀಲ್ ಗಿಬ್ರಾನ್ ಮುನ್ನುಡಿಯ ಲೇಖನ ಬರೆದಿದ್ದಾರೆ.
ಪುಸ್ತಕದ ವಿಷಯ ಹೂಗಳು. ಇಲ್ಲಿ ಹೂಗಳ ಕುರಿತು ಸುಮಾರು ಹದಿನೆಂಟು ಲೇಖನಗಳು ಇವೆ. ಎ ಎನ್ ಮೂರ್ತಿರಾವ್, ಶಿವರಾಮ ಕಾರಂತ, ದ.ರಾ.ಬೇಂದ್ರೆ ಹಾಗೂ ಕೆ ವೆಂಕಟರಾಮಪ್ಪ ಮುಂತಾದ ಹಿರಿಯರಿಂದ ಹಿಡಿದು ಪ್ರಸ್ತುತ ಬರೆಯುತ್ತಿರುವ ಟಿ ಯುಲ್ಲಪ್ಪ, ಬಾಗೇಶ್ರೀ, ಜಯಂತ ಕಾಯ್ಕಿಣಿ ಅವರ ಲೇಖನಗಳು ಇವೆ. ಹಿರಿಯರಾದ ಪ್ರಭುಶಂಕರ್ ಹಾಗೂ ಶಿವರುದ್ರಪ್ಪ ಅವರು ಹಳಗನ್ನಡ ಕವಿಗಳಾದ ಹರಿಹರ ಹಾಗೂ ಪಂಪನ ಕಾವ್ಯಗಳಲ್ಲಿ ವರ್ಣನೆಗಳ ಕುರಿತು ಬರೆದಿದ್ದಾರೆ. ಹಾಗೆಯೇ ಬೇಂದ್ರೆ ಮತ್ತು ಉಷಾ ಅವರ ಕಾವ್ಯದಲ್ಲಿ ಹೂಗಳ ವರ್ಣನೆ ಹೇಗೆ ಬಂದಿದೆ ಎಂಬುದನ್ನು ತಿಳಿಸಿದ್ದಾರೆ. ಸಸ್ಯಶಾಸ್ತ್ರಜ್ಞರಾದ ಬಿ.ಜಿ.ಎಲ್. ಸ್ವಾಮಿ ಅವರ ಲೇಖನ ಅತ್ಯಂತ ವಿಚಾರ ಪೂರ್ಣವಾದದು.
ನ. ರವಿಕುಮಾರ್ ಅವರು ಮೂಲತಃ ತುಮಕೂರಿನವರು. ಕುಣಿಗಲ್ ತಾಲೋಕಿನ ಪುಟ್ಟಯ್ಯನಪಾಳ್ಯ, ಹಾಲಶೆಟ್ಟಿಹಳ್ಳಿ, ಕೆಂಪಸಾಗರ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು, ಎಸ್.ಕೆ. ಎಫ್. ಬೇರೀಂಗ್ಸ್ ಕಾರ್ಖಾನೆಯಲ್ಲಿ 25 ವರ್ಷಗಳ ದುಡಿದಿದ್ದಾರೆ. ಆನಂತರ ‘ಅಭಿನವ’ ಪ್ರಕಾಶನವನ್ನು ಆರಂಭಿಸಿ ಆ ಮೂಲಕ ವಿವಿಧ ಲೇಖಕರ 500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಾಗೂ ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉಪನಿಷತ್ತು(2018), ಮಕ್ಕಳಿಗಾಗಿ ಕೆ.ಎಸ್ . ನರಸಿಂಹಸ್ವಾಮಿ, ಆಯ್ದ ವಿಮರ್ಶೆಗಳು, ದೇವರ ಗೊಡವೆ ಕೂಡಾ ನನಗೆ ಬೇಡ, ಮನುಕುಲದ ಮಾತುಗಾರ, ಮಾತು ತಲೆ ಎತ್ತಿದ ಬಗೆ ಅವರ ಪ್ರಕಟಿತ ಕೃತಿಗಳು. ಕರ್ನಾಟಕ ಪ್ರಕಾಶಕರ ...
READ MORE