ತೆಂಕಣ ನುಡಿಗಳು ಮತ್ತು ಇಂಗ್ಲಿಶ್‌

Author : ಮೇಟಿ ಮಲ್ಲಿಕಾರ್ಜುನ

Pages 346

₹ 200.00




Year of Publication: 2015
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು
Phone: 08022234066

Synopsys

ಇಂಗ್ಲಿಷ್‌, ಹಲವು ಕಾರಣಗಳಿಂದ ಇಂಡಿಯಾದ ಭಾಷಾ ಸಂಸ್ಕೃತಿಗಳೊಡನೆ ತಿಕ್ಕಾಟದ ನಂಟನ್ನು ಹೊಂದಿದೆ. ದಶಕಗಳು ಕಳೆದಂತೆ ಈ ತಿಕ್ಕಾಟದ ಬಗೆ ಬದಲಾಗುತ್ತಾ ನಡೆದಿದೆ. ಬೇರೆ ಬೇರೆ ಭಾಷಾ ಸಂಸ್ಕೃತಿಗಳು ಈ ಸಂದರ್ಭವನ್ನು ಹೇಗೆ ಗ್ರಹಿಸಿವೆ ಮತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿವೆ ಎಂದು ತಿಳಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತೆಂಕಣದ ಭಾಷೆಗಳನ್ನು ಗಮನದಲ್ಲಿಟ್ಟುಕೊಂಡು ಕುವೆಂಪು ಭಾಷಾ ಭಾರತಿಯು ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ತುಳು ಭಾಷೆಗಳು ಇಂಗ್ಲಿಷ್‌ ಭಾಷೆಯೊಡನೆ ನಡೆಸುತ್ತಿರುವ ಅನುಸಂಧಾನವನ್ನು ಅರಿಯಲು ಆಯಾ ಭಾಷೆಯ ಚಿಂತಕರು ಬರೆದ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿ ಪುಸ್ತಕವಾಗಿಸಿದ್ದಾರೆ.

ಪ್ರಸ್ತುತ ಕೃತಿಯಲ್ಲಿ ಕನ್ನಡ-ಇಂಗ್ಲಿಷ್‌: ಅಂಟಿದ ನಂಟು, ಇಂಗ್ಲಿಷ್‌ ಭಾಷಾ ಕಲಿಕೆ ಮತ್ತು ಉದ್ಯೋಗ ಮಾರುಕಟ್ಟೆ, ಕನ್ನಡ-ಇಂಗ್ಲಿಷ್, ತುಳು-ಇಂಗ್ಲಿಷ್‌ ಸಂಬಂಧ ಸ್ವರೂಪ, ತಮಿಳು-ಇಂಗ್ಲಿಷ್‌: ಅಧಿಕಾರ ಸಂಬಂಧಗಳು, ಶಿಕ್ಷಣದಲ್ಲಿ ಇಂಗ್ಲಿಷ್‌ ಅನ್ನು ಕಲಿಯುವ ಅವಕಾರಶದ ಸಮೀಕರಣ ಮತ್ತು ಭಾರತದಲ್ಲಿ ಬಹುಭಾಷೀಯತೆಯ ಸಮತೋಲೀಕರಣ, ಶಿಕ್ಷಣ ಮಾಧ್ಯಮ: ಭಾರತದಲ್ಲಿ ಇಂಗ್ಲಿಷ್‌ ಭಾಷೆಯ ಸ್ಥಾನಮಾನ ಮುಂತಾದ ಲೇಖನಗಳಿವೆ.

About the Author

ಮೇಟಿ ಮಲ್ಲಿಕಾರ್ಜುನ
(15 August 1970)

ಶಿವಮೊಗ್ಗಾದ ಸಹ್ಯಾದ್ರಿ ಆರ್ಟ್ಸ್ ಕಾಲೇಜಿನ ಭಾಷಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಮೇಟಿ ಮಲ್ಲಿಕಾರ್ಜುನ ಅವರು ನುಡಿ ಚಿಂತಕರೆನಿಸಿಕೊಂಡಿದ್ದಾರೆ. ಮೂಲತಃ ಬಾಗಲಕೋಟೆಯವರಾದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತೆಂಕಣದ ನುಡಿಗಳು ಮತ್ತು ಇಂಗ್ಲಿಶ್, ಕರ್ನಾಟಕ ಸಬಾಲ್ಟ್ರನ್ ಓದು ಸಂಪುಟಗಳು, ಕೆವೈಎನ್ ನಾಟಕಗಳ ಓದು ‘ಆಟ-ನೋಟ’ ಅವರ ಸಂಪಾದಿತ ಕೃತಿಗಳು. ...

READ MORE

Related Books