ನಾಗರಾಜ ಹೆಗಡೆ ಅಪಗಾಲ ಅವರ ರಾಗ ಅನುರಾಗ ಕೃತಿಯು ದಿವಂಗತ ಗೋವಿಂದ ಹೆಗ್ಡೆ ಕಾಲ್ ಭಾಗ್ ಅವರ ಬಗೆಗೆ ಅನೇಕ ಸಾಹಿತಿಗಳು, ಲೇಖಕರು ಬರೆದ ಲೇಖನಗಳ ಸಂಗ್ರಹವಾಗಿದೆ. 2013ರಲ್ಲಿ ಈ ಕೃತಿಯು ಮೊದಲ ಮುದ್ರಣವನ್ನು ಕಂಡಿದೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಅಪಗರದಲ್ಲಿ 27-05-1971ರಂದು ಜನಿಸಿದ ಇವರು ಹೊನ್ನಾವರ ಹಾಗೂ ಧಾರವಾಡದಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ, ಕೃಷಿ, ಸಮುದಾಯ ಶಿಕ್ಷಣ, ಪರಿಸರ ಸಂರಕ್ಷಣೆ, ಸಂಗೀತಗಳಲ್ಲಿ ಸಮಾನ ಆಸಕ್ತಿ. ಕಣ್ಣಂಚಿನ ಕಡಲು ಪ್ರಕಟಿತ ಕವನ ಸಂಕಲನ. ಸಹಸ್ರ ಶೀರ್ಷ, ಅಭಿಯಾನ, ರಾಗಾನುರಾಗ, ಗಣನಾಯಕ, ದಾಂಪತ್ಯ ದೀವಿಗೆ, ಸಮಾಜ ಸಂಸ್ಕೃತಿ -ಸಂಪಾದಿತ ಕೃತಿಗಳು. ಹಲವು ಪತ್ರಿಕೆಗಳಲ್ಲಿಇವರ ಕವನ, ಲೇಖನಗಳು ಪ್ರಕಟಗೊಂಡಿವೆ. ...
READ MORE