ಮಣ್ಣಿಗಾಗಿ ಮಡಿದವರು ಶರೀಫ ಗಂ. ಚಿಗಳ್ಳಿ ಅವರ ವ್ಯಕ್ತಿ ಚಿತ್ರಣ ಲೇಖನ ಮಾಲಿಕೆಗಳ ಸಂಗ್ರಹವಾಗಿದೆ. ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ್ದು ನಾವೆಲ್ಲ ಒಂದೇ ಅನ್ನುವ ಭಾವನೆಯನ್ನು ಮೂಡಿಸುವಲ್ಲಿ, ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಅನೇಕ ಮಹನೀಯರು ತಮ್ಮದೆ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ತಮ್ಮ ಜೀವದ ಹಂಗು ತೊರೆದು ಹೋರಾಡಿದ್ದಾರೆ. ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ಮಹನೀಯರಲ್ಲಿ ಶೂರ ಸುಭಾಷ್ ಚಂದ್ರ ಬೋಸ್, ಬಾಲ ಗಂಗಾಧರ ತಿಲಕ್, ತಾತ್ಯಾ ಟೋಪಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚನ್ನಮ್ಮ, ಶೂರ ಸಂಗೊಳ್ಳಿ ರಾಯಣ್ಣ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿಯಂತಹ ಅನೇಕ ಮಹನೀಯರ ತ್ಯಾಗದಿಂದಾಗಿ ನಾವೆಲ್ಲ ಸ್ವಾತಂತ್ರ ಭಾರತದಲ್ಲಿ ಇಂದಿಗೆ ಎಪ್ಪತ್ತೈದರ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಆಚರಣೆಯನ್ನು ಆಚರಿಸಲು ಕಾರಣೀಭೂತರಾದವರನ್ನು ನಾವು ಸ್ಮರಿಸಬೇಕು. ಆ ನಿಮಿತ್ತವಾಗಿ ಕರ್ನಾಟಕ ರಾಷ್ಟ್ರ ಜ್ಯೋತಿ, ಕರುನಾಡ ಹಣತೆ ಸಾಹಿತ್ಯ ಸೇವಾ ರತ್ನದಂತಹ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಯುವ ಸಾಹಿತಿ, ಬರಹಗಾರ, ಕವಿ, ಕಲಾವಿದರಾದ ಶರೀಫ ಚಿಗಳ್ಳಿಯವರು ಭಾರತ ಮಾತೆಯ ಬಂಧನ ಬಿಡುಗಡೆಗಾಗಿ ಹಾಗೂ ಈ ನಾಡಿನ ಕಣ್ಮಣಿಗಳಾಗಿ ಸಮಾಜವನ್ನುದ್ಧರಿಸಿದ ಅನೇಕ ಧಾರ್ಮಿಕ ಪುರುಷ, ಶರಣರ, ಸಂತರ್ಪಣೆ, ಕವಿ, ಕಲಾವಿದರ ಕುರಿತು ತಮ್ಮದೇ ಆದ ಶೈಲಿಯಲ್ಲಿ ಪರಿಚಯಿಸಿದ ಕೃತಿಯೇ 'ಮಣ್ಣಿಗಾಗಿ ಮಡಿದವರು" ಇದೊಂದು ವ್ಯಕ್ತಿ ಚಿತ್ರಣಗಳ ಲೇಖನಗಳ ಮಾಲಿಕೆ ಇದಾಗಿದೆ ಎಂದು ರಾಮು ಮುಲಗಿ ಅವರು ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿಯ ಬೆಳಗಲಿ ಮೂಲದವರಾದ ಲೇಖಕ ಶರೀಫ ಗಂಗಪ್ಪ ಚಿಗಳ್ಳಿ, 30-07-1985ರಂದು ಗಂಗಪ್ಪ-ಗದಿಗೇವ್ವ ದಂಪತಿಯ ಮಗನಾಗಿ ಜನಿಸಿದರು. ಧಾರವಾಡ ಜಿಲ್ಲೆಯ ಇಂಗಳಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದರು. ಕುಬಿಹಾಳದ ಶ್ರೀ ಜಗ್ಗದಗುರು ಉಜ್ಜಯನಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಹುಬ್ಬಳ್ಳಿಯ ವಿದ್ಯಾನಗರದ ಕೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ ಪಡೆದರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಇಡಿ ಸ್ನಾತಕೋತ್ತರ ಶಿಕ್ಷಣ ಗಳಿಸಿದರು. ಸದ್ಯ ಬೆಳಗಲಿಯ ಗ್ರಾಮ ಪಂಚಾಯತ್ ಕ್ಲಾರ್ಕ್ ವೃತ್ತಿಯಲ್ಲಿರುವ ಇವರು, ಸಮಾಜ ಸೇವೆ, ಸಾಹಿತ್ಯ, ಸಂಶೋಧನೆ, ಓದಿನ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ನಾಡಿನ ವಿವಿಧ ...
READ MORE