ರಂಗಪುರಾಣ

Pages 200

₹ 220.00




Published by: ಥಿಯೇಟರ್ ತತ್ಕಾಲ್ ಬುಕ್ಸ್
Address: ಬೆಂಗಳೂರು

Synopsys

‘ರಂಗಪುರಾಣ’ ಕೃತಿಯು ಚನ್ನಕೇಶವ ಅವರ ನೀನಾಸಂ ದಿನಗಳ ಖಾಸಗಿ ಅನುಭವಗಳ ಕುರಿತ ಕೃತಿಯಾಗಿದೆ. ಈ ಕೃತಿಗೆ ವಿವೇಕ ಶಾನಭಾಗ ಅವರು ಬರೆದ ಪೀಠಿಕೆ ಹೀಗಿದೆ; ಚನ್ನಕೇಶವ ತುಂಬಾ ಬಳಸುತ್ತಿದ್ದ ಶಬ್ದ ಕಮ್ಯೂನಿಟಿ. ಯಾವ ವಿಷಯದ ಮೇಲಿನ ಮಾತುಕತೆಯಾದರೂ ಹೇಗಾದರೂ ಮಾಡಿ ಅದನ್ನು ಕಮ್ಯೂನಿಟಿಗೆ ತಳುಕು ಹಾಕುತ್ತಿದ್ದರು. ಅವರ ಕಮ್ಯೂನಿಟಿಯ ಅರ್ಥವಿಸ್ತಾರ ಬಹು ದೊಡ್ಡದು ಮತ್ತು ಅದನ್ನು ಸಂದರ್ಭಕ್ಕೆ ತಕ್ಕಂತೆ ಅರ್ಥಮಾಡಿಕೊಳ್ಳಬೇಕಿತ್ತು. ಯಾಕೆಂದರೆ ಅವರು ಏಕಕಾಲಕ್ಕೆ ಹಲವು ಕಮ್ಯೂನಿಟಿಗಳಲ್ಲಿ ಸಕ್ರಿಯವಾಗಿದ್ದರು. ಕಲೆಯ ವಿಷಯಕ್ಕೆ ಬಂದರೆ ಅವರ ಚಿತ್ರಕಲಾ ಪರಿಷತ್ತಿನ ನಂಟಿರುವ ಕಮ್ಯೂನಿಟಿ, ನೀನಾಸಮ್ ವಿದ್ಯಾರ್ಥಿಗಳ ಕಮ್ಯೂನಿಟಿ, ರಂಗಭೂಮಿಯ ಕಮ್ಯೂನಿಟಿ, ಲೋಕಚರಿತದ ಕಮ್ಯೂನಿಟಿ, ಮಕ್ಕಳ ಬೇಸಿಗೆ ಶಿಬಿರದ ಮೂಲಕ ರಾಜ್ಯದಾದ್ಯಂತ ಹರಡಿದ್ದ ಕಮ್ಯೂನಿಟಿ, ಅದೇ ರೀತಿ ಚಿತ್ರರಂಗ, ಸಾಹಿತ್ಯ, ಗೊಂಬೆಯಾಟ ಹೀಗೆ ಹಲವು ಕಮ್ಯೂನಿಟಿಗಳ ಭಾಗವಾಗಿದ್ದ ಚನ್ನಕೇಶವ ಸದಾ ಎಲ್ಲರನ್ನೂ ಒಳಗೊಳ್ಳಬೇಕೆಂಬ ತುಡಿತವಿದ್ದವರು. ಅದು ಯೋಚಿಸಿ ತಳೆದ ನಿಲುವಲ್ಲ, ಅವರಿದ್ದದ್ದೇ ಹಾಗೆ. ಆದ್ದರಿಂದ ಅವರೊಬ್ಬರು ಇದ್ದರೆ ಸಾವಿರ ಜನ ಜೊತೆಗಿದ್ದ ಹಾಗೆ. ದೋಷವೆನ್ನುವಷ್ಟರ ಮಟ್ಟಿಗೆ ಅವರದು ನಿಸ್ವಾರ್ಥ ಸ್ವಭಾವ. ಯಾವಾಗಲೂ, ತನ್ನದಕ್ಕಿಂತ ಇತರರ ಕಷ್ಟಗಳು ಹೆಚ್ಚಿನದೆಂದು ಭಾವಿಸುತ್ತಿದ್ದವರು ಎಂದಿದ್ದಾರೆ.

Related Books