‘ಆಚೀಚೆ’ ಹಿರಿಯ ಸಾಹಿತಿ ಅನಂತಮೂರ್ತಿ ಅವರ ಕೃತಿ. ಅವರ ಇಲ್ಲಿಯ ಬರವಣಿಗೆ ಕೇವಲ ಅಭಿಪ್ರಾಯಗಳ ಮಂಡನೆಗಳಲ್ಲ; ಓದುಗರ ಜೊತೆ ನಡೆಸುವ ಶೋಧವಾಗಿದೆ. ಉದಾಹರಣೆಗೆ ಅಣ್ಣ ಹಜಾರೆಯ ಬಗೆಗೆ ಒಂದು ದೃಷ್ಟಾಂತ ಕಥೆಯೂ ಇದೆ, ಮೆಚ್ಚುಗೆಯ ನೇರ ನಿರೂಪಣೆಯೂ ಇದೆ. ಎರಡನ್ನೂ ಒಟ್ಟಿಗೇ ಓದಿಕೊಳ್ಳಬೇಕು. ಆಗಲೇ ಅಣ್ಣಾ ಹಜಾರೆ ಉಪವಾಸದ ಘಟನೆ ತನ್ನೆಲ್ಲ ಅರ್ಥಗಳನ್ನು ಬಿಚ್ಚಿಕೊಳ್ಳುತ್ತದೆ. ಹಾಗೆಯೇ ಕಂಬಾರರನ್ನು ಕುರಿತಾಗಲೀ, ಚಿಂತಾಮಣಿ ಕೂಡ್ಲೆಕೆರೆ ಅವರ ಕುರಿತಾಗಲೀ ಅಥವಾ ಈಚಿನ ಕವಿಗಳಲ್ಲಿ ಒಬ್ಬರಾದ ಜ, ನಾ. ತೇಜಶ್ರೀ ಅವರ ದೀರ್ಘ ಕವನದ ಕುರಿತಾಗಲಿ ಚಿಂತಿಸುವಾಗ ಕಾವ್ಯದ ವಿವರಗಳೂ ಇವರ ಗಮನದಲ್ಲಿರುತ್ತವೆ. ಅಂತೆಯೇ ಕೃತಿಯ ಹಿಂದಿರುವ ಅನುಭವದ ತಾತ್ವಿಕ ಶೋಧವೂ ನಡೆದಿರುತ್ತದೆ. ಇಲ್ಲಿಯ ಎಲ್ಲ ಬರವಣಿಗೆಯೂ ನೇರ, ಸರಳ ಆದರೆ ಒಳಗಿನ ತಿರುಳು ಗಾಢ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE