ಡಾ. ಎಂ.ಎಂ. ಪಡಶೆಟ್ಟಿ ಅವರ ಪ್ರೀತಿಯ ಕ್ಷೇತ್ರರ ಜಾನಪದ ಅಧ್ಯಯನ. ಅವರ ಆಲೋಚನಾ ಕ್ರಮ ಹಾಗೂ ಅಭಿವ್ಯಕ್ತಿಯ ಪರಿ ಎಲ್ಲವೂ ಜಾನಪದೀಯವೇ ಆಗಿದೆ. ಹೀಗಾಗಿ ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಅವರಿಗೆ ಒಂದು ವಿಶೇಷವಾದ ಸ್ಥಾನವಿದೆ. 2007 ರಷ್ಟು ಹಿಂದೆಯೇ ಅವರ ಜನಪದ ಅಧ್ಯಯನದ ಇನ್ನೊಂದು ಮಹತ್ವದ ಕೃತಿ ದಾಂಗುಡಿ ಪ್ರಕಟವಾಗಿತ್ತು. ಪ್ರಸ್ತುತ ಅಡಕಲು ಕೃತಿಯು ಡಾ. ಎಂ.ಎಂ.ಪಡಶೆಟ್ಟಿ ಅವರು ಬೇರೆ ಬೇರೆ ಆಕರ ಗ್ರಂಥಗಳಿಗೆ ಬರೆದ ಅಧ್ಯಯನ ಪೂರ್ಣ ಹಾಗೂ ಬೇರೆ ಬೇರೆ ಆಕರ ಗ್ರಂಥಗಳಿಗೆ ಬರೆದ ಅಧ್ಯಯನಪೂರ್ಣ ಲೇಖನಗಳನ್ನು ಒಳಗೊಂಡಿದೆ. ದಾಂಗುಡಿ ಹಾಗೂ ಅಡಕಲು ಇವೆರಡೂ ಶೀರ್ಷಿಕೆಗಳು ಜಾನಪದ ನುಡಿಗಟ್ಟಿನಿಂಜ ಹಕ್ಕಿಕೊಂಡಂಥವುಗಳಾಗಿವೆ. ದಾಂಗುಡಿ ಸಹಜ ಹಬ್ಬುವಿಕೆಯ ಸಂಕೇತವಾದರೆ, ಅಡಕಲು ಪಾರಂಪರಿಕ ಜ್ಞಾನಸಂಗ್ರಹದ ಸಂಕೇತವಾಗಿದೆ.
ಜಾನಪದ ಅಧ್ಯಯನ ಕ್ಷೇತ್ರದಲ್ಲಿಯೇ ವಿಶೇಷವೆನ್ನಿಸಬಹುದಾದ ಹಾಲುಮತ ಸಂಸ್ಕೃತಿಯ ಅಧ್ಯಯನ ಅವರಿಗೆ ತುಂಬಾ ಪ್ರಿಯವಾದ ಕ್ಷೇತ್ರವಾಗಿದೆ. ಮೊಗೆದಷ್ಟು ಹೊಸಹೊಸ ಆಯಾಮಗಳಲ್ಲಿ ತೆರೆದುಕೊಳ್ಳುವ ಆ ಕ್ಷೇತ್ರ ಅವರನ್ನು ನಿರಂತರವಾಗಿ ಆಕರ್ಷಿಸಿದೆ. ನಮ್ಮ ದೇಶದ ಚರಿತ್ರೆಯನ್ನು ಗ್ರಾಮ ಚರಿತ್ರೆಗಳ ಮೂಲಕವೇ ನಿರ್ವಚಿಸಿಕೊಳ್ಳಬೇಕು ಎಂಬುದು ಇತ್ತೀಚಿನ ಸಬಾಲ್ಟ್ರನ್ ಸಿದ್ಧಾಂತಿಗಳವಾದ. ಈ ವಾದಕ್ಕೆ ಪೂರಕವೆನ್ನುವಂತೆ 1985ರಷ್ಟು ಹಿಂದೆಯೇ ಡಾ. ಪಡಶೆಟ್ಟಿ ಅವರು ಗ್ರಾಮಚರಿತ್ರೆಗಳ ಬರವಣಿಗೆಯಲ್ಲಿ ತೊಡಗಿದ್ದರು.
ಎಂ. ಎಂ. ಪಡಶೆಟ್ಟಿ ಅವರು ಮಲ್ಲಪ್ಪ ಪಡಶೆಟ್ಟಿ ಮತ್ತು ಅಯ್ಯಮ್ಮ ಮಲ್ಲಪ್ಪ ಪಡಶೆಟ್ಟಿ ಅವರ ಮಗನಾಗಿ 01-06-1949 ರಂದು ಅಸ್ಕಿ ಗ್ರಾಮದ ಸಿಂದಗಿ ತಾಲ್ಲೂಕಿನ ವಿಜಯಪುರ ಜಿಲ್ಲೆಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಅಸ್ಕಿಯಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಕಲಕೇರಿಯಲ್ಲಿ, ಕಾಲೇಜು ಶಿಕ್ಷಣವನ್ನು ವಿಜಯಪುರದಲ್ಲಿ ಪಡೆದರು. 1974 ರಲ್ಲಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಜಿ.ಪಿ ಪೋರವಾಲ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ ಅಲ್ಲಿ ಕನ್ನಡ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರು. 1991 ರಲ್ಲಿ ತಿಂಥಿಣಿ ಮೋನಪ್ಪಯ್ಯ – ಒಂದು ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ...
READ MORE