ಬದುಕು ಮಾಯೆ

Author : ಸಿ. ಸುವರ್ಣ (ಸುವರ್ಣ ಶಿವಪ್ರಸಾದ್)

Pages 122

₹ 65.00




Year of Publication: 2010
Published by: ಗಾಯತ್ರಿ ಎಂಟರ್ ಪ್ರೈಸಸ್
Address: ನಂ. 483, ಪೋರ್ಟ್ ಮೊಹಲ್ಲಾ, ಮೈಸೂರು

Synopsys

‘ಬದುಕು ಮಾಯೆ’ ಲೇಖಕಿ ಸಿ. ಸುವರ್ಣ ಅವರ ಲೇಖನಗಳ ಸಂಕಲನ. ಪತ್ರಕರ್ತೆಯಾಗಿದ್ದ ಲೇಖಕಿ, ಇಲ್ಲಿಯವು ಲೇಖನಗಳು ಅನ್ನುವುದಿಕ್ಕಿಂತ ಸುದ್ದಿ ವಿಶ್ಲೇಷಣೆ ಎನ್ನಬಹುದು. ಇದರಲ್ಲಿ ದಿನನಿತ್ಯ ತಮ್ಮ ಸುತ್ತಮುತ್ತ ಹಾಗೂ ರಾಜ್ಯ-ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವ ದೊಡ್ಡ-ಚಿಕ್ಕ ವಿಷಯಗಳನ್ನೆಲ್ಲ ತನ್ನದೇ ಆದ ದೃಷ್ಟಿಕೋನದಿಂದ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಅವರ ಆಸಕ್ತಿಯ ವಿಷಯಗಳು ಒಂದೆರಡಲ್ಲ. ಮಹಿಳೆಯ ಸ್ಥಿತಿಗತಿ, ಅವಳ ಮೇಲಿನ ದೌರ್ಜನ್ಯ, ರೈತರ ಆತ್ಮಹತ್ಯೆ, ವಿಫಲ ಸರ್ಕಾರಿ ಯೋಜನೆಗಳು, ಧಾರಾವಾಹಿಗಳ ನೇತ್ಯಾತ್ಮತೆ, ದಲಿತರ ಶೋಷಣೆ, ರಾಜಕಾರಣದ ಅಧಃಪತನ, ಶಾಸ್ತ್ರೀಯ ಸ್ಥಾನಮಾನ, ಮೊಬೈಲ್ - ಸೈಬರ್ ಅಪರಾಧಗಳು, ಪರಿಸರ ವಿರೋಧಿ ಕಾಮಗಾರಿಗಳು, ಲೋಕಾಯುಕ್ತ ದಾಳಿ, ರಸ್ತೆ, ಅವ್ಯವಸ್ಥೆ, ದಿಕ್ಕು ತಪ್ಪುತ್ತಿರುವ ಮಹಿಳಾ ಸಂಘಟನೆಗಳು, ಹದಿಹರೆಯದ ಮಕ್ಕಳ ಸಮಸ್ಯೆ..ಹೀಗೆ ಯಾವುದೂ ಅವರಿಗೆ ತಳ್ಳಿಹಾಕಲ್ಪಡುವಂತ ವಿಷಯವೇ ಅಲ್ಲ. ಪ್ರತಿ ವಿಷಯವನ್ನೂ ಜಾಗೃತೆಯಿಂದ ವಿಶ್ಲೇಷಿಸಿದ್ದಾರೆ.

About the Author

ಸಿ. ಸುವರ್ಣ (ಸುವರ್ಣ ಶಿವಪ್ರಸಾದ್)
(23 March 1972)

ಲೇಖಕಿ ಸಿ.ಸುವರ್ಣ ಅವರು 1972 ಮಾರ್ಚ್ 23 ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಚನ್ನಾಪುರ ಗ್ರಾಮದಲ್ಲಿ ಜನಿಸಿದರು. ತಂದೆ-ಚಿಕ್ಕಯ್ಯ, ತಾಯಿ- ಇಂದಿರಾ. ಹಾಸನದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ಅವರು ಹಾಸನವಾಣಿ ಹಾಗೂ ಜನತಾಮಾಧ್ಯಮ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರೆಕರ್ತೆಯಾಗಿ ಕಾರ್ಯನಿರ್ವಹಿಸಿದ ಇವರು ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಅವರನ್ನು ವಿವಾಹವಾಗಿದ್ದಾರೆ. ಇವರ ಕೃತಿಗಳು ‘ಬದುಕುಮಾಯೆ’ ಲೇಖನ ಸಂಗ್ರಹ, ‘ಚಾಕಣದ ಸುಭದ್ರೆ’ ನೀಳ್ಗತೆಗಳು 2018 ರಲ್ಲಿ ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಧನಸಹಾಯದಿಂದ ಪ್ರಕಟವಾಗಿವೆ. ಜೊತೆಗೆ ‘ಒಂದ್ಕಥೆ’ ಎಂಬ ಕಾದಂಬರಿ 2019ರಲ್ಲಿ ಮೈಸೂರಿನ ಅಭಿರುಚಿ ...

READ MORE

Related Books