ವಿಷನಿಮಿಷಗಳು

Author : ಹಿರೇಮಲ್ಲೂರು ಈಶ್ವರನ್

Pages 163

₹ 1.00




Year of Publication: 1946
Published by: ಎಸ್.ಎ. ಸಾವಂತ
Address: ಕೆಳೆಯರ ಕೂಟ, ಬ್ಯಾಡಗಿ

Synopsys

ಲೇಖಕ ಹಿರೇಮಲ್ಲೂರು ಈಶ್ವರನ್ ಬರೆದ ಕೃತಿ -ವಿಷನಿಮಿಷಗಳು. ಆಪ್ತರು, ಇಷ್ಟರು ಹಾಗೂ ಸಂಬಂಧಿಕರ ಕುರಿತು ಬರೆದಿರುವ ಒಂದು ರೀತಿಯ ಆತ್ಮಕಥನವಿದು. ಕೃತಿಗೆ ಮುನ್ನುಡಿ ಬರೆದ ಜೆ.ಪಿ. ರಾಜರತ್ನಂ ‘ಬರವಣಿಗೆ ಸೀಯಾಳದಷ್ಟು ಸರಳವಾಗಿದೆ. ಆಡಂಬರವಿಲ್ಲ, ಉದ್ರೇಕವಿಲ್ಲ. ಅಬ್ಬರವಿಲ್ಲ. ಕೃತಕತೆ ಇಲ್ಲ, ಹೊಸತನ ತೋರಿಸಬೇಕೆಂಬ ಹುಚ್ಚು ಹೊಳೆಯ ಹೆಸರಿನಲ್ಲಿ ಈಚೀಚೆಗೆ ತೇಲಿ ಬರುತ್ತಿರುವ ಕಲ್ಮಶದ ಕಣ ಒಂದಿಷ್ಟಿಲ್ಲ. ಮಾತುಗಳ ಮಿತಗಮನ ವಸ್ತುವಿಗೆ ತಕ್ಕಂತೆ, ಮಕ್ಕಳ ನಡೆಯಂತೆ ಸಹಜ. ಅಂತಹ ಮಿಂಚು, ಗುಡುಗು, ಮಳೆ, ಆಲಿಕಲ್ಲು ಇಲ್ಲದಿದ್ದರೂ ಕಂಠ ಸ್ತಂಭಿತವಾದ ಕಣ್ಣಿನ ತೇವ ಉದ್ದಕ್ಕೂ ಹೃದಯಸ್ಪರ್ಶಿಯಾಗಿದೆ. ’ ಎಂದು ಪ್ರಶಂಸಿಸಿದ್ದಾರೆ.

ಇಲ್ಲಿಯ ಬಹುತೇಕ ಬರೆಹಗಳು ಧಾರವಾಡದ ಜಯಕರ್ನಾಟಕ, ಬೆಂಗಳೂರಿನ ಉಷಾ ಹಾಗೂ ಜೀವನ, ರಬಕವಿಯ ಪ್ರಗತಿ ಮತ್ತು ಬೆಳಗಾವಿಯ ತಿರುಗುಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಷಕನ್ಯೆ, ಯಾರಿವಳು, ಯುಗಾದಿ ಬಂದಾಗ, ಶಿವನೇ ಶಾಂತಿ, ತಾಯೀ ನಮಸ್ಕಾರ ಹೀಗೆ ವಿವಿಧ ಶೀರ್ಷಿಕೆಯ 30 ಬರೆಹಗಳಿವೆ.

About the Author

ಹಿರೇಮಲ್ಲೂರು ಈಶ್ವರನ್
(01 January 1922 - 23 June 1998)

ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ವಿಜ್ಞಾನಿ ಡಾ. ಹಿರೇಮಲ್ಲೂರು ಈಶ್ವರನ್, ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರು ಗ್ರಾಮದವರು. ಲಿಂಗರಾಜ ಮಹಾವಿದ್ಯಾಲಯದಿಂದ ಎಂ.ಎ.  ಪಡೆದ ನಂತರ ಕೆಲಕಾಲ ಸೊಲ್ಲಾಪುರದಲ್ಲಿ ಕನ್ನಡ ಅಧ್ಯಾಪಕ ರಾಗಿದ್ದರು. 'ಹರಿಹರ ಕವಿಯ ಕೃತಿಗಳು - ಒಂದು ಸಂಖ್ಯಾನಿರ್ಣಯ' ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಉನ್ನತ ಅಧ್ಯಯನಕ್ಕಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಸಮಾಜವಿಜ್ಞಾನ ಕ್ಷೇತ್ರದಲ್ಲಿ ಡಿ.ಲಿಟ್. ಪದವಿ ಪಡೆದರು. ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ನಂತರ ಹಾಲೆಂಡ್‌ ನಲ್ಲಿ ನೆಲೆಸಿದರು. ಮನುಸ್ಕೃತಿ ಮತ್ತು ಪಾಶ್ಚಾತ್ಯ ಕುಟುಂಬ ಜೀವನ ಕುರಿತು ಸಂಶೋಧನೆ ನಡೆಸಿ ಇಂಗ್ಲಿಷ್ ನಲ್ಲಿ ಗ್ರಂಥ ಪ್ರಕಟಿಸಿದ್ದಾರೆ. ಅವರು ರಚಿಸಿದ 8 ಗ್ರಂಥಗಳ ಜೊತೆಗೆ 50ಕ್ಕೂ ಹೆಚ್ಚು ...

READ MORE

Related Books