ಮನಶಾಸ್ತ್ರಜ್ಞರಾದ ಪಿ.ವಿ. ಭಂಡಾರಿ ಮತ್ತು ಹರೀಶ್ ಶೆಟ್ಟಿ ಬಂಡ್ಸಾಲೆ ಆಧುನಿಕ ಯುಗದಲ್ಲಿ ಹದಿಹರೆಯದವರು ವಹಿಸಬೇಕಾದ ಎಚ್ಚರವನ್ನು ಧ್ಯಾನಿಸಿ ಬರೆದ ಕೃತಿ ಇದು. ಹದಿಹರೆಯದವರ ವರ್ತನೆ, ಅಂತರ್ಜಾಲದಲ್ಲಿ ಜಾಲಾಡುವಾಗ ವಹಿಸಬೇಕಾದ ಎಚ್ಚರಗಳು, ಮಾದಕ ವಸ್ತುಗಳು, ಪರೀಕ್ಷಾ ಭಯ, ಇಂಗ್ಲಿಷ್ ಬಗೆಗಿನ ಭಯ, ಪ್ರೇಮ ಮುಂತಾದ ಪ್ರಮುಖ ವಿಷಯಗಳ ಕುರಿತ ವಿವರಗಳು ಇಲ್ಲಿವೆ.
ಡಾ. ಪಿ.ವಿ. ಭಂಡಾರಿ ವೈದ್ಯರು. ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾನಿಲಯದಲ್ಲಿ ಎಂ.ಬಿ.ಬಿ.ಎಸ್, ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಮನೋವೈಜ್ಞಾನಿಕ ಚಿಕಿತ್ಸೆಯಲ್ಲಿ ಡಿಪ್ಲೊಮಾ, ಮಂಗಳೂರಿನ ಫಾ. ಮುಲ್ಲರ್ಸ್ ವೈದ್ಯಕೀಯ ಮಹಾ ವಿದ್ಯಾನಿಲಯದಿಂದ ಡಿ.ಎನ್.ಬಿ (ಮನೋವೈಜ್ಞಾನಿಕ ಚಿಕಿತ್ಸೆ) ಪದವಿ ಪಡೆದರು. ತಾಲ್ಲೂಕು ಕನ್ನಡ ಸಾಹಿತ್ಯ ಪ್ರಶಸ್ತಿ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಾ. ಎಸ್.ಎಸ್. ಜಯರಾಂ ಪ್ರಶಸ್ತಿ, ಸ್ಪಂದನ ಪ್ರಶಸ್ತಿ, ಶ್ರೇಷ್ಠ ಮನೋವೈದ್ಯ-2012 ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡುವ 2012ರ ಸಂಯಮ ಪ್ರಶಸ್ತಿಗಳು ಸಂದಿವೆ. ಕಳೆದ 15 ವರ್ಷಗಳಿಂದ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ತಜ್ಞ ಮನೋವೈದ್ಯ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪನ್ಯಾಸಗಳ ಮೂಲಕವೂ ಸ್ವಸ್ಥ ಜೀವನಕ್ಕಾಗಿ ...
READ MORE