ಬೇರು ತೋರಿದ ಹಾದಿ

Author : ಕುಮಾರಚಲ್ಯ

Pages 144

₹ 75.00




Year of Publication: 2003
Published by: ಅಭಿರುಚಿ ಪ್ರಕಾಶನ
Address: ನಂ- 386, 14ನೇ ಮುಖ್ಯರಸ್ತೆ, 3ನೇ ತಿರುವು, ಸರಸ್ವತಿಪುರಂ, ಮೈಸೂರು- 570009
Phone: 9980560013

Synopsys

‘ಬೇರು ತೋರಿದ ಹಾದಿ’ ಕುಮಾರ ಚಲ್ಯ ಅವರ ಲೇಖನಗಳ ಸಂಗ್ರಹವಾಗಿದೆ. ಜಾನಪದ ಸಾಹಿತ್ಯದಲ್ಲಿ ವಿಪುಲವಾಗಿ ಸಿಗುವ ಸಹೃದಯತೆ, ಮಾನವೀಯ ಗುಣ ಮತ್ತು ಜೀವನ ಪ್ರೀತಿಗಳನ್ನು ಇತ್ತೀಚಿನ ದಿನಗಳಲ್ಲೆಲ್ಲಿ ಹುಡುಕೋಣ ! ಪಲ್ಲಟಗೊಂಡ ಜೀವನ ವಿಧಾನ ಮತ್ತು ಮನಸ್ಸಿದ್ದರೂ ಮಾಡಲಾರದಂಥ ಸಂದಿಗ್ಧಗಳು ಮನುಷ್ಯನನ್ನಿಂದು ಕಟ್ಟಿಹಾಕಿ ಮಿತಿ ಹೇರಿವೆ. ಈ ಹಿನ್ನೆಲೆಯಲ್ಲಿ ಜಾನಪದ ಆಚರಣೆಗಳು ಮತ್ತು ಆಶಯಗಳ ಸ್ವರೂಪವನ್ನು ಇಲ್ಲಿ ಚರ್ಚಿಸಲಾಗಿದೆ.

About the Author

ಕುಮಾರಚಲ್ಯ

ಅಕ್ಯಾಡೆಮಿಕ್ ವಲಯದಲ್ಲಿ ಡಾ.ಸಿ.ಎಸ್.ಶಿವಕುಮಾರಸ್ವಾಮಿ ಎಷ್ಟು ಪ್ರಸಿದ್ದರೋ, ಕುಮಾರಚಲ್ಯ, ನಾನ್- ಅಕ್ಯಾಡೆಮಿಕ್ ವಲಯದಲ್ಲಿ ಅಷ್ಟೇ ಪ್ರಸಿದ್ಧರು. ನಿರರ್ಗಳವಾಗಿ ಹಳಗನ್ನಡ ಕಾವ್ಯವನ್ನು ಕುರಿತು ಅಧಿಕೃತವಾಗಿ ವ್ಯಾಖ್ಯಾನಿಸುವ ಕೆಲವೇ ಕೆಲವು ವಿದ್ವಾಂಸರ ಪೈಕಿ ಚಲ್ಯ ಸಹ ಒಬ್ಬರು. ಪ್ರತೀ ಮಾತಿನಲ್ಲೂ ಕೇಳುಗನನ್ನು ಪರವಶಗೊಳಿಸುವ ಛಾತಿ ಬೇರೆ. ಹಾಗೆಯೇ, ಎಜ್ಯುಕೇಟ್ ಮಾಡುವ ಹಂಬಲ ಕೂಡ. ವಿದ್ಯಾರ್ಥಿ ಸಮೂಹದಿಂದ ಚಲ್ಯಮೇಸ್ಟ್ರು ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಇವರು ಬರೆದಿರುವುದು, ಪ್ರಕಟಿಸಿರುವುದು ಕಡಿಮೆ ಎನಿಸಿದರೂ, ಅವೊಂದೊಂದು ಮೌಲಿಕ. ಚಲ್ಯ ಎಂಬ ಪುಟ್ಟ ಹಳ್ಳಿಯ ಈ ಕುಮಾರಸ್ವಾಮಿಯವರ ಪ್ರಖರ ಬಂಡಾಯೀಕೃತ ಆಲೋಚನೆಗಳು ಪ್ರಪ್ರಥಮಬಾರಿಗೆ ಪ್ರಕಟಗೊಂಡದ್ದು ನವಾಬ ಎಂಬ ಗಮನಾರ್ಹ ಕವನ ಸಂಕಲನದ ...

READ MORE

Reviews

ಹೊಸತು-2004- ಅಕ್ಟೋಬರ್‌

ಜಾನಪದ ಸಾಹಿತ್ಯ ಹಿಂದಿನಿಂದಲೂ ಬದುಕಿನ ಜೀವಾಳ ವಾಗಿಯೇ ರೂಪುಗೊಂಡಿದೆ. ಅಲ್ಲಿ ಕಾಣಬರುವುದು ಸಮೂಹಗಾನ ಮತ್ತು ಸಮಷ್ಟಿಯ ದುಡಿತ. ಒಗ್ಗಟ್ಟು ಅಲ್ಲಿ ಎದ್ದು ಕಾಣುವ ಅಂಶ ಮಾತ್ರವಲ್ಲ; ಸಮೃದ್ಧಿ ಸುಖ ಸಂತೋಷಗಳಿಗೆ ಅತೀ ಅವಶ್ಯವಾದ ನೆಲೆಗಟ್ಟೂ ಆಗಿದೆ. ಜಾನಪದ ಸಾಹಿತ್ಯದಲ್ಲಿ ವಿಪುಲವಾಗಿ ಸಿಗುವ ಸಹೃದಯತೆ, ಮಾನವೀಯ ಗುಣ ಮತ್ತು ಜೀವನ ಪ್ರೀತಿಗಳನ್ನು ಇತ್ತೀಚಿನ ದಿನಗಳಲ್ಲೆಲ್ಲಿ ಹುಡುಕೋಣ ! ಪಲ್ಲಟಗೊಂಡ ಜೀವನ ವಿಧಾನ ಮತ್ತು ಮನಸ್ಸಿದ್ದರೂ ಮಾಡಲಾರದಂಥ ಸಂದಿಗ್ಧಗಳು ಮನುಷ್ಯನನ್ನಿಂದು ಕಟ್ಟಿಹಾಕಿ ಮಿತಿ ಹೇರಿವೆ. ಈ ಈ ಹಿನ್ನೆಲೆಯಲ್ಲಿ ಜಾನಪದ ಆಚರಣೆಗಳು ಮತ್ತು ಆಶಯಗಳ ಸ್ವರೂಪವನ್ನು ಇಲ್ಲಿ ಚರ್ಚಿಸಲಾಗಿದೆ. ಜಾನಪದ ಸಾಹಿತ್ಯದಲ್ಲಿ ಸಿಗುವ ಬದುಕಿನ ನೈಜ ಚಿತ್ರಣಗಳು, ಕಥಾರೂಪದಲ್ಲಿ ನೀಡುವ ಸಂದೇಶಗಳು ಮತ್ತು ನಂಬಿಕೆಗಳನ್ನಿಲ್ಲಿ ಪ್ರಸ್ತಾವಿಸಲಾಗಿದೆ.

Related Books