ಮಾಧ್ಯಮದ ಸುತ್ತಮುತ್ತ

Author : ಎ.ಎಸ್.ಎನ್. ಹೆಬ್ಬಾರ್ (ಐರೋಡಿ ಶಂಕರನಾರಾಯಣ ಹೆಬ್ಬಾರ್)

Pages 352

₹ 234.00




Year of Publication: 2020
Published by: ವಿಕಾಸ ಪ್ರಕಾಶನ
Address: # 1541, 16 ನೇ ಮುಖ್ಯ ರಸ್ತೆ , ಎಂ.ಸಿ. ಲೇಔಟ್, ವಿಜಯನಗರ ಬೆಂಗಳೂರು -560040
Phone: 9900095204

Synopsys

ಲೇಖಕ ಎ.ಎಸ್.ಎನ್. ಹೆಬ್ಬಾರ್ ಅವರ ಕೃತಿ-ಮಾಧ್ಯಮದ ಸುತ್ತಮುತ್ತ. ಮಾಧ್ಯಮದ ಲೋಕದ ಒಳಾಂತರಂಗ ಹಾಗೂ ಈ ಕ್ಷೇತ್ರ ಪರಿಧಿಗೆ ಬರುವ ವಿವಿಧ ಕ್ಷೇತ್ರಗಳಲ್ಲಿ ತಾವು ಕಂಡ ವಿವಿಧ ಘಟನೆ-ಸನ್ನಿವೇಶಗಳ ಸ್ವಾರಸ್ಯಕತೆಯ ಪ್ರಸಂಗಗಳನ್ನು ದಾಖಲಿಸಿದ ಕೃತಿ ಇದು. ಈ ಲೇಖನಗಳ ಮೂಲಕ ಅವರು ತಮ್ಮ ಸಾಮಾಜಿಕ ಹೊಣೆಗಾರಿಕೆ, ನೀಡುವ ಸಂದೇಶಗಳು ಹಾಗೂ ನಿರೂಪಣಾ ಶೈಲಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಲೇಖನಗಳು ಓದುಗರ ಗಮನ ಸೆಳೆಯುತ್ತವೆ.

ನ್ಯಾಯಾಧೀಶರಿಂದಲೇ ನೌಕರರ ಕ್ಷೇಮನಿಧಿ ಗುಳುಂ, ಕ್ಷೇಮನಿಧಿ ಗುಳುಂ ಹಗರಣ ಸಾಮಾನ್ಯರಿಗೊಂದು ಕಾನೂನು - ನ್ಯಾಯಾಧೀಶರಿಗೊಂದು ಕಾನೂನಾ? , ಪ್ರಖ್ಯಾತ ಪತ್ರಕರ್ತೆಯೇ ಹತ್ಯೆಯಾದ ಕಥೆ,  ಭಾರತದಲ್ಲೊಬ್ಬ ಜೋಸೆಫ್ ಫಿಟೆಲ್ !ಪತ್ರಕರ್ತರ ಸುದ್ದಿಗೆ ಹೋದೀರಿ ನೆತ್ತಿಯ ಮೇಲೆ ಕತ್ತಿ ತೂಗುತ್ತಿರುವ ನ್ಯಾಯಮೂರ್ತಿ ಸೌಮಿತ್ರ ಸೆನ್‌ ಪ್ರಕರಣ, ಸೋಮಾಲಿ ಎಂಬ ಶೂರೆ, ಹೈಕೋರ್ಟು ನ್ಯಾಯಮೂರ್ತಿಯನ್ನು ರಾಜಗೋಪಾಲಾಚಾರಿ ಕಿತ್ತು ಹಾಕಿದ ಕಥೆ,  'ಅತಿಥಿ ದೇವೋಭವ'ದ ನಾಡಿನಲ್ಲಿ ,ಸುಮ್ಮನೆ ಬಂತು ಸಾವು, ಸೌಮ್ಯ ಎಂಬ ಪತ್ರಕರ್ತೆಗೆ ,ಚಿಲಿ ಎಂಬ ದೇಶ ಹುಲಿಯಾದ ಕಥೆ, ಮೂಗು ಕಳಕೊಂಡವಳಿಗೆ ಮೂಗು ನೀಡಿದ ಪತ್ರಿಕೆ , ಕಣ್ಣು ಕಾಣದ್ದನ್ನು ಕಿವಿ ಕೇಳುತ್ತದೆ - ಬಾಯಿ  ಮಾತಾಡುತ್ತದೆ  ಕ್ರಿಕೆಟ್ ಕಾಮೆಂಟ್ರಿ  ನೀಡುವ ಕುರುಡ ,  ಪ್ಯಾಂಟು ಹಾಕಿದ್ದಕ್ಕೆ ಛಡಿಯೇಟಿನ ಶಿಕ್ಷೆ ಎದುರಿಸಿದ ಪತ್ರಕರ್ತೆ,  ತೆವಲಿಗೆ ಬಲಿಯಾದರೇ ತಿವಾರಿ? ಸತ್ಯ ಬರೆದರೂ ಸೆರೆಮನೆ ಶಿಕ್ಷೆ ಪಡೆದ ಪತ್ರಕರ್ತರು, ಅಮೆರಿಕಾದ ಅಧ್ಯಕ್ಷೆಯಾಗುವಳೇ ಈ ಭಾರತೀಯ ಮಹಿಳೆ , ನೇಪಾಳದ 'ಗೂಳಿ'ಗೆ ಬಿತ್ತು ಲಗಾಮು ೧೯. ಕಾಯುತ್ತಿವೆ. ಕಲ್ಲುಗಳು - ಹೊಡೆದು ಸಾಯಿಸಲಿಕ್ಕೆ, ಒಂದು ಸಣ್ಣ ದೇಶದ ಸಣ್ಣ ಕಥೆ . ಅಧಿಕಾರಸ್ಥರ ಕಾಮಾಯಣ ಸೇರಿದಂತೆ 52 ಪರಿವಿಡಿಗಳನ್ನು ಹೊಂದಿದೆ.

About the Author

ಎ.ಎಸ್.ಎನ್. ಹೆಬ್ಬಾರ್ (ಐರೋಡಿ ಶಂಕರನಾರಾಯಣ ಹೆಬ್ಬಾರ್)

ಎ.ಎಸ್.ಎನ್ ಹೆಬ್ಬಾರ್ ಎಂದೇ ಪ್ರಸಿದ್ಧರಾಗಿರುವ ಐರೋಡಿ ಶಂಕರಣನಾರಾಯಣ ಹೆಬ್ಬಾರ್ ಅವರು ಮೂಲತಃ ಕುಂದಾಪುರದವರು. ವೃತ್ತಿಯಲ್ಲಿ ವಕೀಲರಾಗಿ, ಪ್ರವೃತ್ತಿಯಲ್ಲಿ ಸಾಹಿತಿಯಾಗಿ, ಪತ್ರಕರ್ತರಾಗಿಯೂ ಗುರುತಿಸಿಕೊಂಡಿರುವ ಹೆಬ್ಬಾರ್ ಅವರು ಹತ್ತಾರು ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹತ್ತಾರು ದೇಶ ಸುತ್ತಿದ ಅನುಭವ ಇರುವ ಹೆಬ್ಬಾರರರು 50 ವರ್ಷಗಳ ಪತ್ರಿಕಾ ವೃತ್ತಿಯ ಅನುಭವಗಳ ಜೊತೆಗೆ ಪ್ರವಾಸಕಥನಗಳನ್ನು ಬರೆದಿದ್ದಾರೆ. ಸಾಹಿತ್ಯ, ಪತ್ರಿಕಾಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಕಾರ್ಯನಿರ್ವಹಿಸಿರುವ ಹೆಬ್ಬಾರರಿಗೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. ...

READ MORE

Related Books