‘ಅಂಬೇಡ್ಕರ್ ಮತ್ತು ಮಾರ್ಕ್ಸ್’ ಡಾ.ರಾವ್ ಸಾಹೇಬ್ ಕಸಬೆ ಅವರ ಮರಾಠಿ ಮೂಲ ಕೃತಿಯಾಗಿದ್ದು, ಚಂದ್ರಕಾಂತ ಪೋಕಳೆ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯಲ್ಲಿ ಡಾ. ಅಂಬೇಡ್ಕರ್ ಮತ್ತು ದಲಿತ ಚಳುವಳಿಯ ಹಿನ್ನೆಲೆ, ಡಾ. ಅಂಬೇಡ್ಕರ್ ಮತ್ತು ಅವರ ಚಳುವಳಿ-1, ಡಾ. ಅಂಬೇಡ್ಕರ್ ಮತ್ತು ಅವರ ಚಳುವಳಿ-2, ಡಾ. ಅಂಬೇಡ್ಕರ್ ಮತ್ತು ಸ್ವತಂತ್ಯ್ರ ಭಾರತದೆದುರಿಗಿರುವ ಸವಾಲುಗಳು, ಡಾ. ಅಂಬೇಡ್ಕರರ ಸಾಮ್ಯವಾದಿ ನಿಲುವು ಮತ್ತು ಮಾರ್ಕ್ಸ್‌ವಾದದ ಪರಿಚಯ, ಮಾರ್ಕ್ಸ್‌ವಾದಕ್ಕೆ ಸಂಬಂಧಿಸಿದಂತೆ ಡಾ. ಅಂಬೇಡ್ಕರರು ಎತ್ತಿದ ಪ್ರಶ್ನೆ-ನೀಡಿದ ಉತ್ತರ, ಮಾರ್ಕ್ಸ್- ಅಂಬೇಡ್ಕರ್ ಮತ್ತು ಆಧುನಿಕ ಭಾರತ ಎನ್ನುವಂತಹ ಏಳು ಅನುಕ್ರಮಣಿಕೆಗಳಿವೆ.
ಈ ಗ್ರಂಥದ ಮಿತಿಯಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್ ವಿಷಯವು ಅತ್ಯಂತ ವಾದಗ್ರಸ್ತವಾದುದು. ಕಾರಣವೇನೆಂದರೆ ಅವರಿಬ್ಬರೂ ಕೇವಲ ವಿಚಾರವಂತರೇ ಆಗಿರಲಿಲ್ಲ. ತಮ್ಮ ಚಳುವಳಿಯ ನಿರ್ಮಾಪಕರೂ ಆಗಿದ್ದರು. ಹೀಗಾಗಿ ಅವರ ವಿಚಾರಗಳನ್ನು ತಳಹದಿಯೆಂದು ಭಾವಿಸಿ ಇಂದು ಹಲವು ಸಂಸ್ಥೆ, ಸಂಘಟನೆ ಹಾಗೂ ರಾಜಕೀಯ ಪಕ್ಷಗಳು ಕಾರ್ಯವನ್ನು ಮಾಡುತ್ತಿವೆ. ಹಾಗೆಯೇ ವಿರೋಧಿ ಕಾರ್ಯವನ್ನು ಮಾಡುವವರೂ ಇದ್ದಾರೆ. ಆದುದರಿಂದ ಅಂಬೇಡ್ಕರ್ ಮತ್ತು ಮಾರ್ಕ್ಸ್‌ರನ್ನು ಒಟ್ಟಾಗಿ ಯೋಚಿಸುವವರು ಕರ್ಮಠ ಕಮ್ಯುನಿಸ್ಟರಿಗೆ ಮತ್ತು ಸನಾತನಿ ದಲಿತರಿಗೆ; ಅದೇ ರೀತಿ ಮೂಲತಃ ಮಾರ್ಕ್ಸ್‌ವಾದ ವಿರೋಧಿ ನಿಲುವು ಹೊಂದಿದ ಸಮಾಜವಾದಿಗಳನ್ನು ಕೆರಳಿಸುವಂತಹದ್ದಾಗಿದೆ ಎನ್ನುವುದರ ಸಂಪೂರ್ಣ ಅರಿವು ನನಗಿದೆ ಎನ್ನುತ್ತಾರೆ ಲೇಖಕ.
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE