ಸೇಡಿಯಾಪು ಕೃಷ್ಣಭಟ್ಟರ ನೆನಪಿಗಾಗಿ ಲೇಖಕಿ ವೈದೇಹಿ ಅವರು ಸಂಗ್ರಹಿಸಿದ ಬರೆಹಗಳ ಕೃತಿ ಇದು. ಸೇಡಿಯಾಪು ಕೃಷ್ಣಭಟ್ಟರ ಬದುಕು ಹಾಗೂ ಬರೆಹ ಕುರಿತು ವಿವಿಧ ಲೇಖಕರು ಬರೆದ ಬರೆಹಗಳ ಸಂಗ್ರಹವಾಗಿದ್ದು, ಕೃಷ್ಣಭಟ್ಟರ ಬೌದ್ಧಿಕ ಎತ್ತರವನ್ನು, ಅಧ್ಯಯನದ ಆಳವನ್ನು ಇಲ್ಲಿ ಕಾಣಿಸಲಾಗಿದೆ.
ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...
READ MORE