`ಜಾನಪದ ಲೇಖನಗಳು’ ಕೃತಿಯು ಎಲ್.ಆರ್. ಹೆಗಡೆ ಅವರ ಮೂಲ ಕೃತಿಯಾಗಿದ್ದು, ರೇಣುಕಾ ರಾಮಕೃಷ್ಣ ಭಟ್ಟ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಹಲವಾರು ಜನಾಂಗಗಳ ಆಚಾರ ವಿಚಾರಗಳನ್ನು ತಿಳಿಸಲಾಗಿದೆ. ಅವರ ಜನಪದ ಸಂಸ್ಕೃತಿಯನ್ನು ವಿಭಿನ್ನವಾಗಿ ಬಣ್ಣಿಸಲಾಗಿದ್ದು, ಕೆಲವೊಂದು ಜನಾಂಗಗಳ ಸಂಸ್ಕೃತಿಯ ಅನಾವರಣ ಬಹುವಾಗಿ ಕಾಡುತ್ತದೆ. ಅಘನಾಶಿನಿ ಬದಿಗೆ ಚೈತ್ರ ಹುಣ್ಣಿಮೆ ಸಮಯದಲ್ಲಿ ಸುಗ್ಗಿ ಕುಣಿತ ಮಾಡುತ್ತಾರೆ. ಗುಮಟೆ ಪದಗಳನ್ನು ಹಬ್ಬ-ಹುಣ್ಣಿಮೆ, ಮದುವೆ, ದೀಪಾವಳಿ, ಹರಿದಿನ ರಾತ್ರಿಗಳಲ್ಲದೇ, ಮನರಂಜನೆಗಾಗಿ ದಿನಾ ರಾತ್ರಿಯಲ್ಲೂ ಹೇಳಿ ಗುಮಟೆ ಬಡಿಯಬಹುದು. ಇಲ್ಲಿನ ಗಿರಿಜನರಲ್ಲಿ ಪ್ರಮುಖರಾದ ಹಾಲಕ್ಕಿ ಒಕ್ಕಲಿಗರಲ್ಲಿ ತೀರ ಪ್ರಾಚೀನ ಕಾಲದ ಜೀವನದ ಹಲವು ಪಳೆಯುಳಿಕೆಗಳು ದೊರೆಯುತ್ತವೆ. ಹಾಲು (ಬಿಳಿ) ಅಕ್ಕಿಯ ಬತ್ತವನ್ನು ಬೆಳೆಯುವುದರಿಂದ ಇವರಿಗೆ ಹೀಗೆ ಹೆಸರು ಬಂದಿದೆ ಎಂದು ಕೆನರಾ ಗೆಝೆಟಿಯರ್ ನಲ್ಲಿ ತಿಳಿಸಲಾಗಿದೆ. ಇವರಲ್ಲಿ ಅಣ್ಣನ ಹೆಂಡತಿಯನ್ನು ತಮ್ಮಂದಿರು ಉಪಯೋಗಿಸುವ ಪದ್ಧತಿ ಅಲ್ಲಲ್ಲಿ ಇನ್ನೂ ಉಂಟು. ಅತ್ತಿಗೆ ಪ್ರೀತಿಯವಳು ಎಂಬ ಅರ್ಥವೇ ತೀರ ಪ್ರಾಚೀನ ಕಾಲದಲ್ಲಿ ಈ ಪದ್ಧತಿ ಸಾರ್ವತ್ರಿಕವಾಗಿದ್ದಿರಬಹುದೆಂಬುದನ್ನು ಸೂಚಿಸುತ್ತದೆ. ಅತ್ತಿಗೆಯ ಮೈಥುನಕ್ಕೆ ಪಾತ್ರ ಎಂಬುದರಿಂದಲೇ ಮೈದುನ (ಸಂ.ಮೈಥುನ) ಎಂಬ ಶಬ್ದವು ಬಂದಿದೆ ಎಂದು ನಾ. ಕಸ್ತೂರಿಯವರು ನನ್ನೊಡನೆ ಹೇಳಿದುದುಂಟು. ಈ ಪದ್ಧತಿ ಬುಡಕಟ್ಟು ಜನಾಂಗದವರಲ್ಲಿ ಇರುವಂಥದ್ದು (ಹಾಲಕ್ಕಿಗಳು ತಾವು ಪಾಂಡವರ ವಂಶದವರೆಂದು ಹೇಳುತ್ತಾರೆ.). ಆಫ್ರಿಕಾದ ಕಾಡುಜನರು ತಮ್ಮ ಹಿರಿಯರು ಸತ್ತಮೇಲೆ ಅವರ ಶವಗಳ ಭಾಗಗಳನ್ನು ತಿನ್ನುತ್ತಾರೆ. ಹಾಲಕ್ಕಿ ಗುಮಟೆ ಪದವೊಂದರಲ್ಲಿ ಪಾಂಡುವಿನ ಮರಣದ ಅನಂತರ ಪಾಂಡವರು ಅವರ ದೇಹ ಭಾಗಗಳನ್ನು ತಿಂದರು ಎಂಬ ಕಥೆಯಿದೆ.
ಜಾನಪದ ಭೀಷ್ಮ ಹಾಗೂ, ನಡೆದಾಡುವ ಜಾನಪದ ವಿಶ್ವಕೋಶ ಎಂದೇ ಖ್ಯಾತಿಯ ಡಾ.ಎಲ್.ಆರ್. ಹೆಗಡೆ ಅವರು ಜನಿಸಿದ್ದು1923ರಲ್ಲಿ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಅವರ ಹುಟ್ಟೂರು. ತಂದೆ ರಾಮಕೃಷ್ಣ ಹೆಗಡೆ, ತಾಯಿ ಮಹಾಲಕ್ಷ್ಮಿ. ಹೊಲನಗದ್ದೆಯಲ್ಲಿ ಪ್ರಾಥಮಿಕ ಶಿಕ್ಷಣ, ಗುಡೆ ಅಂಗಡಿಗಳಲ್ಲಿ ಹಾಗೂ ಕುಮಟಾದ ಗಿಬ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಪಡೆದರು. 1946ರಲ್ಲಿ , ಮುಂಬಯಿ ವಿಶ್ವ ವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. 1949ರಲ್ಲಿ ಬಿ.ಟಿ.ಪರೀಕ್ಷೆ ಉತ್ತೀರ್ಣರಾದರು ಹಾಗೂ 1950ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ...
READ MORE