ಕವಿ ಕೆ.ಎಸ್. ನಿಸಾರ್ ಅಹಮದ್ ಕವಿತೆಯಷ್ಟೆ ಗದ್ಯವನ್ನು ಸ್ವಾರಸ್ಯಕರವಾಗಿ ಬರೆಯಬಲ್ಲರು ಎಂಬುಕ್ಕೆ ಈ ಕೃತಿ ಸಾಕ್ಷಿ. ‘ನನ್ನ ಗದ್ಯದ ಒಲವು ಓಲುವೆಗಳು, ಆಸೆ ಸಂಕಲ್ಪಗಳ ಅನ್ನೋನ್ಯತೆ, ಅನಿಶ್ಚಿತತೆಯ ಚಿತ್ರಕ್ಕೆ ಅಮರತ್ವದ ಚೌಕಟ್ಟು, ಪ್ರಜಾಪ್ರಭುತ್ವದ ಸುತ್ತಮುತ್ತ, ಕುವೆಂಪು : ವ್ಯಕ್ತಿ, ಕೃತಿ ಅವಲೋಕನ, ಶೈಲಿ : ವ್ಯಕ್ತಿತ್ವದ ಕೀಲಿ, ಕಾವ್ಯರೂಪಿ ಅಡಿಗರಿಗೆ ಅಳಿವಿಲ್ಲ’ ಮುಂತಾದ ಲೇಖನಗಳ ಸಂಗ್ರಹ ‘ಅಚ್ಚು ಮೆಚ್ಚು’.
ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ...
READ MORE