'ವಧುವಿಗೆ ಉಡುಗೊರೆ’ ಶಾಂತಾದೇವಿ ಮಾಳವಾಡ ಅವರ ವಧುವಿಗೆ ಅವಶ್ಯಕವಾಗಿ ನೀಡಬೇಕಾದ ಸಂಸ್ಕೃತಿ ಬಳುವಳಿಯ ಕುರಿತ ಕೃತಿಯಾಗಿದೆ. ಈ ಕೃತಿಯು ಮದುವೆ ಹೆಣ್ಣಿನ ಕುರಿತ ವಿಚಾರವನ್ನು ತಿಳಿಸುತ್ತದೆ; ಹುಟ್ಟಿದ ಮನೆಗೆ ಹೂವಾಗಿ, ಕೊಟ್ಟ ಮನೆಗೆ ಸಿರಿಯಾಗುವ ನವವಧು ಪತಿಗೃಹಕ್ಕೆ ಹೊರಟು ನಿಂತಳು. ಇದುವರೆಗೆ ತಾಯ ವಾತ್ಸಲ್ಯ, ತಂದೆಯ ಪ್ರೀತಿ, ಸೋದರ-ಸೋದರಿಯರ ಒಡನಾಟದಲ್ಲಿ ಬೆಳೆದ ಹೆಣ್ಣು ಮಗಳು ಇಂದು ನವವಧುವಾಗಿ ಹುಟ್ಟಿದ ಮನೆಯನ್ನು ತೊರೆದು, ಹೆತ್ತೊಡಲನ್ನು ಬರಿದು ಮಾಡಿ, ಬಂಧು ಬಾಂಧವರನ್ನು ಬಿಟ್ಟು, ಗೆಳತಿಯರನ್ನಗಲಿ ಹೊರಟಿಹಳು. ಹೊಸ ಸೀರೆಯುಟ್ಟು, ಜರದ ಕುಪ್ಪಸ ತೊಟ್ಟು, ಅಂದದ ಆಭರಣಗಳನ್ನು ಧರಿಸಿ, ಕೈತುಂಬ ಹಸಿರು ಬಳೆಗಳನ್ನಿಟ್ಟುಕೊಂಡು ಕಿಂಕಿಣಿ ನಾದಗೈಯುತ್ತ, ಅರಿಷಿಣ-ಕುಂಕುಮ ಭೂಷಿತಳಾಗಿ, ಪರಿಮಳ ದ್ರವ್ಯಗಳನ್ನು ಪೂಸಿಕೊಂಡು, ಘಮಘಮಿಸುವ ಮಲ್ಲಿಗೆ, ಗುಲಾಬಿ, ಸಂಪಿಗೆಗಳಿಂದ ಕೇಶಾಲಂಕಾರ ಮಾಡಿಕೊಂಡು, ಪತಿಯ ಪ್ರೇಮದ ನೋಟಕ್ಕೆ ನಸು ನಾಚಿ ನಿಂತ, ನಗುಮೊಗದ ವಧುವನ್ನು ಕಂಡು, ಹಿರಿಯರೆಲ್ಲ ಆಶೀರ್ವದಿಸಿ ಉಡುಗೊರೆಯನ್ನೀಯುವರು ಎನ್ನುವುದನ್ನು ವಿಶ್ಲೇಷಿಸುತ್ತದೆ.
ಲೇಖಕಿ ಶಾಂತಾದೇವಿ ಮಾಳವಾಡ ಅವರ ಹುಟ್ಟೂರು ಬೆಳಗಾವಿ. ತಂದೆ ಮುರಿಗೆಪ್ಪಶೆಟ್ಟಿ, ತಾಯಿ ಜಯವಂತಿದೇವಿ. ಹಿರಿಯ ಲೇಖಕ ಡಾ. ಸ.ಸ. ಮಾಳವಾಡರ ಪತ್ನಿ. ಗೃಹಿಣಿಯಾಗಿದ್ದ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1978) ಜ.ಚ.ನಿ. ಬೆಳ್ಳಿಹಬ್ಬ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಬಾಗಲಕೋಟೆಯಲ್ಲಿ (1999) ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ಗಿದರು. ಕನ್ನಡ ಸಾಹಿತ್ಯ ಪರಿಷತ್ತು 'ಗೌರವ ಸದಸ್ಯತ್ವ' ನೀಡಿ ಸನ್ಮಾನಿಸಿದೆ. ಕನ್ನಡ ತಾಯಿ, ಕೆಳದಿ ಚೆನ್ನಮ್ಮ (ಜೀವನ ಚರಿತ್ರೆ), ಸಮುಚ್ಚಯ. ವಧುವಿಗೆ ಉಡುಗೊರೆ (ಪ್ರಬಂಧ), ಮೊಗ್ಗೆಯ ಮಾಲೆ (ಕಥಾಸಂಕಲನ), ಸೊಬಗಿನ ಮನೆ (ಗೃಹಾಲಂಕಾರ), ಶ್ರೀ ...
READ MORE