‘ಮಹಾಜನ ವರದಿ’ ಕೃತಿಯು ಓಂಕಾರ ಕಾಕಡೆ ಅವರ ಸ್ಥಳಗಳ ವಿಚಾರಗಳುಳ್ಳ ಮಾಹಿತಿ ನೀಡುವ ಲೇಖನ ಸಂಕಲನವಾಗಿದೆ. ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದಲ್ಲಿ ಬಿಡುಗಡೆಗೊಂಡ ಈ ಕೃತಿಯು ಮಹಾಜನ ವರದಿ ಜಾರಿಯಾದರೆ ಮಹಾರಾಷ್ಟ್ರದ ಜತ್ತ ತಾಲೂಕಿನ ಈ ಕೆಂಪು ಬಣ್ಣದಲ್ಲಿ ತೋರಿಸಿದ ಪ್ರದೇಶ ಕರ್ನಾಟಕಕ್ಕೆ ಸೇರುತ್ತದೆ ಎನ್ನುವ ಮಾಹಿತಿಯನ್ನು ನೀಡುತ್ತದೆ.
ಪ್ರೊ. ಓಂಕಾರ ಕಾಕಡೆ ಅವರು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳು. ಈ ಮುಂಚೆ ಅವರು ಪ್ರಸಾರಾಂಗ ನಿರ್ದೇಶಕರಾಗಿದ್ದರು. ವಿ.ವಿ.ಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗಕ್ಕೆ ನೇಮಕವಾಗುವ ಮುನ್ನ ಅವರು ಪ್ರಜಾವಾಣಿಯಲ್ಲಿ (2001-03) ಬೆಳಗಾವಿ ಹಾಗೂ ಬೀದರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿದ್ದರು. ಕೃತಿಗಳು: ಲಿಜಂಡರ್ ಆ್ಯಂಡ್ ಹ್ಯೂಮನ್ ರೈಟ್ಸ್ಳಿ (ಸಂಪಾದಕತ್ವ). ಮಹಿಳಾ ಸಬಲೀಕರಣ ಮತ್ತು ಕನ್ನಡ ದಿನಪತ್ರಿಕೆಗಳು ಇತ್ಯಾದಿ. ...
READ MORE