'ಭಾರತೀಯ ಬಹುಮುಖೀ ಸಂಸ್ಕೃತಿ’ ಎಚ್.ಎಸ್. ಗೋಪಾಲರಾವ್ ಅವರ ಲೇಖನಗಳ ರಚನೆಯಾಗಿದೆ. ಭಾರತೀಯ ಸಂಸ್ಕೃತಿಯನ್ನು ಕುರಿತು ಹಲವಾರು ಲೇಖನಗಳನ್ನು 'ನ್ಯೂ ಏಜ್' ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಆ ಲೇಖನಗಳ ಪುಸ್ತಕ ರೂಪವನ್ನು ಎಚ್. ಎಸ್. ಗೋಪಾಲರಾವ್ ಅವರು ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕದಲ್ಲಿ ಹದಿಮೂರು ಲೇಖನಗಳಿದ್ದು, ಇತಿಹಾಸವನ್ನು ಸಾಕಷ್ಟು ವಸ್ತು ನಿಷ್ಠವಾಗಿ ಅಭ್ಯಾಸ ಮಾಡಿರುವುದು ಗೊತ್ತಾಗುತ್ತದೆ. ಮೊದಲ ಲೇಖನ ಲೇಖಕರ ವಿಚಾರಗಳಿಗೆ ಹಿನ್ನೆಲೆಯನ್ನು ಒದಗಿಸಿದೆ.
ಡಾ. ಎಚ್.ಎಸ್. ಗೋಪಾಲರಾವ್ ಅವರು 1946ರ ನವೆಂಬರ್ 18ರಂದು ನೆಲಮಂಗಲ ತಾಲ್ಲೂಕಿನ ಹುಲ್ಲೇಗೌಡನ ಹಳ್ಳಿಯಲ್ಲಿ ಜನಿಸಿದರು. ಎಲೆಕ್ಟ್ರಿಕಲ್ ಇಂಜನಿಯರಿಂಗ್ ಡಿಪ್ಲೊಮ ಮುಗಿಸಿ ನಂತರ ಅವರು ಮೈಸೂರು ವಿವಿ ಕನ್ನಡ ಎಂ.ಎ. (1984- ಎರಡು ಚಿನ್ನದ ಪದಕ) ಪದವಿ ಪಡೆದರು. ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು ಒಂದು ಸಾಂಸ್ಕೃತಿಕ ಅಧ್ಯಯನ ಕುರಿತು ಪಿಎಚ್. ಡಿ. ಪದವಿ ಪಡೆದರು. (ಮೈಸೂರು ವಿ ವಿ 1991). ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್, ಕೆಪಿಟಿಸಿಎಲ್ ನಿಯಮಿತ, (ಕನ್ನಡ ಸಮನ್ವಯಾಧಿಕಾರಿಯಾಗಿ) ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ಶಾಸ್ತ್ರ ಬೋಧಕರಾಗಿ ಕೆಲಸ ನಿರ್ವಹಿಸಿದ್ದಾರೆ. ಜೇನು ನಂಜು, ...
READ MOREಹೊಸತು- ನವೆಂಬರ್ -2005
ಭಗವತ್ ಶರಣ ಉಪಾಧ್ಯಾಯ ಅವರು ಭಾರತದ ಇತಿಹಾಸ ವನ್ನು ಕುರಿತು ಸಾಕಷ್ಟು ಚಿಂತನೆ ನಡೆಸಿದವರು. ಅವರು 1971-72ರ ಅವಧಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಕುರಿತು ಹಲವಾರು ಲೇಖನಗಳನ್ನು 'ನ್ಯೂ ಏಜ್' ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಆ ಲೇಖನಗಳ ಪುಸ್ತಕ ರೂಪವನ್ನು ಎಚ್. ಎಸ್. ಗೋಪಾಲರಾವ್ ಅವರು ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕದಲ್ಲಿ ಹದಿಮೂರು ಲೇಖನಗಳಿದ್ದು ಇತಿಹಾಸವನ್ನು ಸಾಕಷ್ಟು ವಸ್ತು ನಿಷ್ಠವಾಗಿ ಅಭ್ಯಾಸ ಮಾಡಿರುವುದು ಗೊತ್ತಾಗುತ್ತದೆ. ಮೊದಲ ಲೇಖನ ಲೇಖಕರ ವಿಚಾರಗಳಿಗೆ ಹಿನ್ನೆಲೆಯನ್ನು ಒದಗಿಸಿದೆ. ಭಾರತೀಯ ಸಂಸ್ಕೃತಿ ಎಷ್ಟರಮಟ್ಟಿಗೆ ಬಹುಮುಖೀ ಸಂಸ್ಕೃತಿಯಾಗಿದೆ ಎಂಬ ಸಂಗತಿಯನ್ನು ಆರ್ಯರು, ಕುಶಾನರು, ಮುಸ್ಲಿಮರು ಮುಂತಾದವರ ಪ್ರಭಾವಗಳ ಮೂಲಕ ಗುರುತಿಸಲಾಗಿದೆ. ವಿಜ್ಞಾನ, ಭಾಷಾಶಾಸ್ತ್ರ, ಮಾನವಶಾಸ್ತ್ರ ಮುಂತಾದ ಅನ್ಯ ಶಿಸ್ತುಗಳ ಅಪಾರವಾದ ಮಾಹಿತಿಯನ್ನು ಪುಸ್ತಕ ಉಪಯೋಗಿಸಿಕೊಂಡಿದೆ. ಇಲ್ಲಿನ ವಿಚಾರಗಳ ಬಗ್ಗೆ ವಿದ್ವಾಂಸರಿಂದ ಹೆಚ್ಚಿನ ಚರ್ಚೆಯಾದರೆ ಲೇಖಕರ ಶ್ರಮ ಹೆಚ್ಚು ಸಾರ್ಥಕ.