ಗೋವಿಂದರಾಯ ಎಂ ಅವರ ಕೃತಿ ಗಾಂಧಿ ಎಂಬ ಕೌತುಕ .ಗಾಂಧಿಯ ಆದರ್ಶಗಳು, ‘ಜೀವನ ಪ್ರೀತಿ’ ಇಂದಿನ ಜನಜೀವನಕ್ಕೆ ಆದರ್ಶವಾಗಬೇಕಿದೆ. ಗಾಂಧಿ ಕಂಡ ಕನಸಿನ ಭಾರತವು ನನಸಾಗಿ, ಸರ್ವರೂ ನೆಮ್ಮದಿಯಿಂದ ಬದುಕಬೇಕಾಗಿದೆ. ವಿಶ್ವದಲ್ಲಿಯೇ ಜನಮನವನ್ನು ಪಡೆದ ಗಾಂಧಿಯ ವಿಚಾರಧಾರೆಗಳನ್ನು ಸಮಕಾಲೀನ ಸಮಾಜದ ಎದುರಿಗೆ ತರುವ ಮೂಲಕ ಅಂತರoಗ ಮತ್ತು ಬಹಿರಂಗ ಶುದ್ಧ ಮಾಡಿಕೊಂಡು ಸ್ವಾಸ್ಥ್ಯ ಸಮಾಜಕ್ಕೆ ಅರಿವಿನ ಸಾರವನ್ನು ನೀಡುವುದಕ್ಕಾಗಿ ‘ಜೀವನ ಪ್ರೀತಿ ಮಾಲಿಕೆ’ಯ ಮೂಲಕ ‘ಗಾಂಧಿ ಎಂಬ ಕೌತುಕ’ ಎಂಬ ಪುಸ್ತಕದ ಆಶಯ.
ಸಮಕಾಲೀನ ಸಂಸ್ಕೃತಿ ಚಿಂತಕರು ಹಾಗೂ ಕನ್ನಡ ಅಧ್ಯಾಪಕರಾದ ಡಾ. ಗೋವಿಂದರಾಯ ಎಂ ಇವರು ಮೂಲತಃ ಪಾವಗಡ ತಾಲ್ಲೂಕಿನ ಚನ್ನಕೇಶವಪುರ ಗ್ರಾಮದ ಮೂಡ್ಲಗಿರಿಯಪ್ಪ ಮತ್ತು ಶ್ರೀಮತಿ ಚಿಕ್ಕವ್ವ ಇವರ ಪುತ್ರನಾಗಿ 15.02.1981 ರಂದು ಜನಿಸಿದರು. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಚನ್ನಕೇಶವಪುರದಲ್ಲಿ ಮುಗಿಸಿ, ಮಧುಗಿರಿಯ ಶ್ರೀ ಟಿ.ವಿ. ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ 65ನೇ ರ್‍ಯಾಂಕ್ ಮೂಲಕ ಪದವಿ ಪಡೆದರು. 2002-2004ರವರೆಗೆ ಬೆಂಗಳೂರು ವಿಶ್ವವಿದ್ಯಾಲಯ ತುಮಕೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪೂರೈಸಿ ಐದನೇ ರ್‍ಯಾಂಕ್ ಪಡೆದಿದ್ದಾರೆ. ನಂತರ ತುಮಕೂರಿನ ಕೆ. ...
READ MORE