ಖಾದ್ರಿ ಶಾಮಣ್ಣ ಅವರ ಸಂಪಾದಕೀಯ, ಅಗ್ರ ಲೇಖನ, ಮುಖಪುಟ ಸಂಪಾದಕೀಯಗಳು ಬಾನುಲಿಯ ಭಾಷಣಗಳು ಹಾಗೂ ಚಿಂತನ ಕಾರ್ಯಕ್ರಮಗಳ ಸಂಗ್ರಹ ಕೃತಿ ‘ಅರ್ಪಣ’.ಈ ಕೃತಿಗೆ ಪು.ತಿ.ನ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ವಿಷಯ ವಿಭಾಗದಲ್ಲಿ ಅರ್ಪಣ, ಸಾರ್ವಜನಿಕ-ಸರ್ವೋದಯ ಇತ್ಯಾದಿ, ಲೋಕ ವೀಕ್ಷಣೆ, ಭಾಷೆ-ಸಾಹಿತ್ಯ-ಕಲೆ-ಸಂಸ್ಕೃತಿ-ಕ್ರೀಡೆ, ಸಾಕ್ಷರತೆ-ಶಿಕ್ಷಣ, ನುಡಿಚಿತ್ರಮಾಲೆ ಎಂಬ ಶೀರ್ಷಿಕೆಗಳಿವೆ.
ಖಾದ್ರಿ ಶಾಮಣ್ಣ ಅವರ ಜನನ 6 ಜೂನ್, 1925 - ಮೇಲುಕೋಟೆಯ ವೈದಿಕ ಪರಿವಾರದಲ್ಲಿ, ಆರಂಭದ ಶಿಕ್ಷಣ ಊರಿನಲ್ಲಿ, ಆನಂತರ ಮೈಸೂರಿಗೆ ಹೆಚ್ಚಿನ ಶಿಕ್ಷಣಕ್ಕಾಗಿ, ಸೀನಿಯರ್ ಇಂಟರ್‌ಗೆ ಬರುವ ವೇಳೆಗೆ ರಾಮಕೃಷ್ಣ - ಸ್ವಾಮಿ ವಿವೇಕಾನಂದರ ಪ್ರಭಾವದ ತೆಕ್ಕೆಯಲ್ಲಿ ಎಳೆಯ ಖಾದ್ರಿ, ರಾಷ್ಟ್ರೀಯ ಸಂಗ್ರಾಮ ಕೈಬೀಸಿ ಕರೆಯಿತು. 1942 ರ ಚಲೇಜಾವ್ ಚಳವಳಿಯಲ್ಲಿ ಸಕ್ರಿಯ ವಿದ್ಯಾರ್ಥಿಯಾಗಿದ್ದರು. ಹೋರಾಟದ ಕಲಿಗಳನೇಕರ ನಿಕಟ ಸಂಪರ್ಕವಿದ್ದ ಖಾದ್ರಿಯವರು ಸ್ವಾತಂತ್ರ್ಯ ಸಮರದ ಕಾಲದಲ್ಲಿ ಎರಡುಸಲ ಜೈಲಿಗೆ ಹೋಗಿದ್ದರು. ಸ್ವರಾಜ್ಯ ಬಂದಮೇಲೂ ಈ ಪರಂಪರೆ ನಿಲ್ಲಲಿಲ್ಲ, 3 ಬಾರಿ ಮತ್ತೆ ಸೆರೆವಾಸ, ಪ್ರಸಿದ್ಧ ಕಾಗೋಡು ...
READ MORE